Friday, November 20, 2009

ಜೀವಿಗಳಲ್ಲಿ ರೋಗನಿರೋಧಕ ಗುಣ (Immunity in Life forms)

ಸ್ನೇಹಿತರೇ, ಈ ನನ್ನ ಬ್ಲಾಗ್ ಪೋಸ್ಟಿನಲ್ಲಿ ಜೀವಿಗಳ ರೋಗನಿರೋಧಕ ಗುಣ (Immunity) ಬಗ್ಗೆ ಸರಣಿಯನ್ನು ಪ್ರಾರಂಭಿಸುತ್ತಿದ್ದೇನೆ. ದಯವಿಟ್ಟು ನಿಮಗೆ ತಿಳಿದ ಸ್ನೇಹಿತರಿಗೆ ವಿದ್ಯಾರ್ಥಿಗಳಿಗೆ ಈ ತಾಣದ ಬಗ್ಗೆ ಮಾಹಿತಿ ಕೊಡಿ..ತಿಳುವಳಿಕೆ ಕನ್ನಡದ ಮೂಲಕ ಹರಡಲು ಸಹಾಯಕರಾಗಿ.

೧. ಸ್ವಪರಿಚಿತ (innate) ರೋಗನಿರೋಧಕತೆ (immunity)

ನಾನು ಪ್ರಾಣಿಗಳ ರೋಗನಿರೋಧಕ ಗುಣದ ಈ ಮೊದಲ ವಿಶೇಷತೆಯ ಬಗ್ಗೆ ಈ ಕಂತಿನಲ್ಲಿ ತಿಳಿಸಲಿಚ್ಛಿಸುತ್ತೇನೆ. ನನ್ನ ಈ ಲೇಖನಕ್ಕೆ ಒಂದು ಚಾಲಿತ ಚಿತ್ರಮಾಲಿಕೆ(animated clip) ನಿಮ್ಮಲ್ಲಿಗೆ ವಿಷಯವನ್ನು ತರಲು ಸಹಾಯಕವಾಗಬಹುದು.
ರೋಗನಿರೋಧಕ (ರೋನಿ) ಗುಣಗಳು ಎರಡು ಪ್ರಮುಖ ವಾಹಿನಿ (ಇವು ಒಂದಕ್ಕೊಂದು ಪೂರಕ ಮತ್ತು ಸಹಾಯಕ ಕೂಡ ಆಗಿರುತ್ತವೆ) ಗಳಿಂದ ಕೂಡಿವೆ ಎಂದು ಗುರುತಿಸಲ್ಪಟ್ಟಿವೆ. ಇವಕ್ಕೆ ಸ್ವಪರಿಚಿತ (ತಮಗೇ ತಿಳಿದ) ಮತ್ತು ಪರಿಚಯಾನಂತರದ (ಉದ್ಭವವಾಗುವ) ರೋಗ ನಿರೋಧಕ ಗುಣಗಳು ಎನ್ನಲಾಗಿದೆ ಇವನ್ನೇ Innate ಮತ್ತು Acquired Immunity ಎಂದು ಹೇಳಲಾಗುವುದು.
ಮೊದಲಿಗೆ ಜೀವಿಯ ಜೀವಕೋಶಕ್ಕೆ ಪರಿಚಯವಾಗುವ ಬಾಹ್ಯಾಂಶ (ಅಥವಾ ಬಾಹ್ಯವಸ್ತು ಅಥವಾ ಜೀವಿಯ ಅಂಶ ಎಂದರೂ ತಪ್ಪಿಲ್ಲ, antigen)ದ ಕೆಲವು ತತ್ವಗಳು (ಬಾಹ್ಯತತ್ವ ಅಥವಾ ಬಾಹ್ಯಾಂಶದ ಸಣ್ಣ ಸಣ್ಣ ಕಣಗಳು– epitopes) ಜೀವಿಯ ರೋಗನಿರೋಧಕ ಗುಣವನ್ನು ಎಚ್ಚರಿಸುವ ಕೆಲಸ ಮಾಡುತ್ತವೆ. ಆಗ ಜೀವಿಯ ಮೊದಲ ಶ್ರೇಣಿಯ ರೋಗನಿರೋಧಕಗಳನ್ನು ಎಚ್ಚರಿಸುವ ಕ್ರಿಯೆ ಪ್ರಾರಂಭವಾಗುತ್ತದೆ. ಈ ಮೊದಲ ಶ್ರೇಣಿಯ ರೋ.ನಿ. ಗಳು ಚರ್ಮ, ಬೆವರು, ಲಾಲಾ ಅಥವಾ ಜೊಲ್ಲು, ಲೋಳೆ (ಕಿವಿ ಮೂಗಿನಲ್ಲಿ ಕಾಣುವ ಅಂಟಾದ ದ್ರವ)..ಹೀಗೆ. ಈ ಶೇಣಿಯ ಜೀವಕೋಶಗಳೆಂದರೆ ಡೆಂಡ್ರೈಟ್ ಜೀವಕೋಶಗಳು. ಇವು ಚರ್ಮ, ರಕ್ತ, ಒಳಮಾಂಸ ಪದರಗಳು, ಹ್ರುದಯದ ಗೋಡೆಗಳು, ಕರುಳು ಮೇಲ್ ಮತ್ತು ಒಳ ಪದರಗಳು..ಹೀಗೆ ಎಲ್ಲೆಡೆ..ಕಂಡು ಬರುತ್ತವೆ. ಇವು ಇಂದೆಡೆ ಸ್ಥಿತ ಅಥವಾ ಸಂಚರಿಸುವ (fixed or circulating dendritic cells) ಜೀವಕೋಶಗಳಾಗಿರುತ್ತವೆ. ರೋಗಕಾರಕಗಳ ಅಂಶಗಳು ಚರ್ಮವನ್ನು ಭೇದಿಸಿ ಡೆಂಡ್ರೈಟುಗಳನ್ನು ಸಂಧಿಸಿದಾಗ, ರೋಗಕಾರಕ ಸಂಬಂಧಿತ ಅಂಶ ಅಥವಾ ಕಣ, ರೋಸ.ಕ. (pathogen associated patterns, PAPs) ಗಳನ್ನು ಈ ಜೀವಕೋಶಗಳು ಗುರುತಿಸುತ್ತವೆ. ಇಲ್ಲಿ ಹಲವಾರು ಅಂತರ್ಸಂಬಂಧಿತ ಮೂಲ ಕ್ರಿಯೆಗಳು ರೋಗಕಾರಕ ಸಂಬಂಧಿತ ಅಂಶಗಳನ್ನು ಮತ್ತು ಆ ಮೂಲಕ ರೋಗಕಾರಕಗಳನ್ನು ನಿಯಂತ್ರಿಸುವ ಕಾರ್ಯಕ್ಕೆ ಶುಭಾರಂಭವಾಗುತ್ತದೆ. ರೋ.ಸ.ಕ. ಗಳನ್ನು ಡೆಂಡ್ರೈಟ್ ಜೀವಕೋಶಕ್ಕೆ ಅಂಟಿಸುವ ಕೆಲಸವನ್ನು ಜೀವಿಯ ರಕ್ತ ಮತ್ತು ಜೀವರಸದಲ್ಲಿರುವ ಪ್ರೋಟೀನುಗಳು ಮಾಡುತ್ತವೆ, ಆಗ ರೋ.ಸ.ಕ.ಗಳನ್ನು ಹೊತ್ತು ಡೆಂಡ್ರೈಟ್ ಜೀವಕೋಶಗಳು ರೋಗನಿರೋಧಕ ಸೈನಿಕ ಕಣ, ರೋಸೈಕ (lymphocuyte) ಗಳ ಉತ್ಪತ್ತಿಯಾಗುವ ಅಂಗಾಂಶಗಳಿಗೆ, ಉದಾಹರಣೆಗೆ ಬಿ. ಜಾತಿಯ ರೋಸೈಕ (B-lymphocuyes) ಗಳನ್ನು ಉತ್ಪಾದಿಸುವ ಮೂಳೆಯ ಮಜ್ಜೆ (bone marrow) ಗೆ ಹೋಗಿ ರೋಸಕ ಗಳ ವರ್ಗಾವಣೆಯನ್ನು ಮಾಡುತ್ತವೆ. ಈ ಕ್ರಿಯೆಯಿಂದ ಈ ಸೈನಿಕ ಕಣಗಳಿಗೆ ರೋಗಸಂಬಂಧಿಕಣಗಳ ಪರಿಚಯವಾಗಿ..ಅದಕ್ಕೆ ಅನುಗುಣವಾದ ರೋಗನಿರೋಧಕ ಪ್ರೋಟಿನುಗಳ ಉತ್ಪಾದನೆಯನ್ನು ರೋಸೈಕಗಳು ಪ್ರಾರಂಭಿಸುತ್ತವೆ. ರೋಗನಿರೋಧಕ ಸೈನಿಕ ಕಣ (ರೋಸೈಕ) ಮೊದಲಿಗೆ ಏನೂ ಅರಿಯದ ಮುಗ್ಧ (unprimed) ಡೆಂಡ್ರೈಟುಗಳು ಮಾಡಿಸುವ ಪರಿಚಯದ ನಂತರ ಪ್ರಬುದ್ಧ (primed or stimulated) ರೋಸೈಕಗಳಾಗಿ ಮಾರ್ಪಡುತ್ತವೆ. ಈ ಪ್ರಬುದ್ಧ ರೋಸೈಕಗಳು ಇನ್ನೊಮ್ಮೆ ದಾಳಿ ಮಾಡುವ ಅದೇ ಜಾತಿಯ ರೋಗಕಾರಕಗಳನ್ನು ಮುತ್ತಿ ನಿಷ್ಕ್ರಿಯಗೊಳಿಸಲು ಸದಾನ್ನದ್ದರಾಗಿರುತ್ತವೆ.
ಇವುಗಳ ಬಗ್ಗೆ ಮತ್ತು ಇತರ ಕ್ಲಿಷ್ಟತೆಗಳನ್ನು ಮುಮ್ದಿನ ಕಂತಿನಲ್ಲಿ ವಿವರಿಸುತ್ತೇನೆ.
ನಿಮ್ಮ ಅನಿಸಿಕೆ, ಸಂದೇಹಗಳನ್ನು ಖಂಡಿತಾ ತಿಳಿಸಿ
..azadis@hotmail.com">mailto:ತಿಳಿಸಿ..azadis@hotmail.com ಗೆ ಬರೆಯಿರಿ.

12 comments:

ಸುಮ said...

ಒಳ್ಳೆಯ ಮಾಹಿತಿ ಸರ್.

ಸೀತಾರಾಮ. ಕೆ. / SITARAM.K said...

nice information

ಜಲನಯನ said...

ಸುಮ ಇದು ಇಮ್ಯುನಿಟಿ ಸೀರೀಸ್ ನ ಮೊದಲ ಕಂತು. ಣಿಮ್ಮ ಸಂದೇಹಗಳಿದ್ದರೆ ತಿಳಿಸಿ.

ಜಲನಯನ said...

Seetaram sir
Immunity is my pet area, and I am working on fish immune system, so this special series. Please give your constructive comments for improving the post.

Guruprasad said...

ಒಳ್ಳೆಯ ಮಾಹಿತಿ....

ಜಲನಯನ said...

ಗುರು, ನನ್ನ ಈ ವಿಜ್ಜಾನದ ಬ್ಲಾಗಿಗೆ ಸ್ವಾಗತ, ಎಲ್ಲರಿಗೆ ಅರ್ಥವಾಗುವಂತೆ ಬರೆಯುವ ಪ್ರಯತ್ನ, ನೀವೇ ಇದಕ್ಕೆ ರಚನಾತ್ಮಕ ಪ್ರತಿಕ್ರಿಯೆ ನೀಡಬೇಕು..

Snow White said...

informative post sir..nice work :)

ಮನಮುಕ್ತಾ said...
This comment has been removed by the author.
ಮನಮುಕ್ತಾ said...

Sir,

Thanks for a good information.

ಮನಸು said...

oLLeya maahiti sir, nimma lekhana marala malligeyalli baralendu aashisutteve. science and technology section nimagaagi kaayutide hahah

ಜಲನಯನ said...

ಸ್ನೋ ವೈಟ್ ಗೆ ನನ್ನ ಧನ್ಯವಾದ..ಇದನ್ನು ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಓದಿದರೆ ಅವರಿಗೂ ಸಹಾಯಕ ವಾಗುತ್ತೆ..ನಿಮ್ಅಗೆ ತಿಳಿದವರಿಗೆ ಲಿಂಕ್ ಕೊಡಿ.

ಜಲನಯನ said...

Manamukta, thanks for your following of my this blog...I wish you send links to your friends who can benefit from these posts in science and technology.