ಎಲ್ಲ ಜೀವಿಗಳ ಬೆಳವಣಿಗೆ ಅಂದರೆ ಪ್ರೋಟೀನ್..ಜೀವ ಕೋಶ ಮತ್ತು ಶರೀರ ಕ್ರಿಯೆಗಳಿಗೆ ಬೇಕಾದುವುದು ಪ್ರೋಟೀನ್ ಗಳ ವಿವಿಧ ರೂಪಗಳಾದ ಹಾರ್ಮೋನುಗಳು (ಚೋದಕಗಳು), ಎಂಜೈಮು (ಕಿಣ್ವ) ಗಳು, ವಿಟಮಿನ್ನುಗಳು ಮತ್ತು ಇತರ ಕಡಿಮೆ ಸಾಂದ್ರತೆಯ ಸಹಸ್ರಾರು ಪ್ರೋಟೀನ್ ತಂತು (ಪೆಪ್ಟೈಡ್) ಗಳು. ಪ್ರೋಟೀನುಗಳು ನೇರವಾಗಿ ಮಾಂಸಖಂಡ, ರಕ್ತ ಮುಂತಾದ ದ್ರವಗಳಾಗಿ ರೂಪುಗೊಂಡರೆ... ಚೋದಕಗಳು ಹಲವಾರು ಶರೀರಕ್ರಿಯೆಗಳಿಗೆ ಅವಶ್ಯಕ (ಲೈಂಗಿಕ ಪರಿಪಕ್ವತೆ, ಬುದ್ಧಿ ಮತ್ತು ದೈಹಿಕ ಬೆಳವಣಿಗೆ..ಇತ್ಯಾದಿ). ಕಿಣ್ವಗಳು ಶರೀರದ ಹಲವಾರು ಕ್ರಿಯೆಗಳಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಭಾಗವಹಿಸುತ್ತವೆ ಹಾಗೂ ಆಹಾರ ಜೀರ್ಣ ಕ್ರಿಯೆಯಲ್ಲಿ ಬಹು ಮುಖ್ಯ ಪಾತ್ರವಹಿಸುತ್ತವೆ. ಉದಾಹರಣೆಗೆ, ಪ್ರೋಟೀನ್ ಭರಿತ ಆಹಾರದ ಜಿರ್ಣಕ್ರಿಯೆಗೆ ಪೆಪ್ಸಿನ್ ಮತ್ತು ಟ್ರಿಪ್ಸಿನ್ ಕಿಣ್ವಗಳು ಬೇಕಾದರೆ ಶರ್ಕರಗಳ (ದಾನ್ಯಭರಿತ ಆಹಾರ) ಪಾಚನ ಕ್ರಿಯೆಗೆ ಇನ್ಸುಲಿನ್ ಕಿಣ್ವ ಅವಶ್ಯಕ. ದೇಹ ರಕ್ಷಣೆಗೆ ರೋಗಕಾರಕಗಳನ್ನು ಗುರುತಿಸಲು ಹಲವಾರು ಕಡಿಮೆ ಸಾಂದ್ರತೆಯ ಪ್ರೋಟೀನ್ ತಂತುಗಳು (ಪೆಪ್ಟೈಡ್) ಬೇಕಾಗುತ್ತವೆ ಇವುಗಳನ್ನು ಸೈಟೋಕೈನ್ ಮತ್ತು ಕೀಮೋಕೈನ್ ಗಳು ಎಂದು ಕರೆಯುತ್ತಾರೆ. ಕಶೇರುಕಗಳ (ವರ್ಟಿಬ್ರೇಟ್) ರೋಗನಿರೋಧಕಗುಣದ ಮಹತ್ವಪೂರ್ಣ ಪ್ರೋಟೀನ್ ಘಟಕಗಳೆಂದರೆ..ಆಂಟಿಬಾಡಿಗಳು
ಇಲ್ಲಿ ರೈಬೋಸೋಮುಗಳ ಕಾರ್ಯವೈಖರಿಯ ಸಂಕ್ಷಿಪ್ತ ಪರಿಚಯ ಮಾಡಿಕೊಡುತ್ತಿದ್ದೇನೆ.
ರೈಬೋಸೋಮುಗಳು (ಚಿತ್ರದಲ್ಲಿ ಬಿಂದುಗಳಂತೆ ಕಾಣುವ) ಪ್ರತಿಜೀವಕೋಶದಲ್ಲೂ ಇರುತ್ತವೆ. ಎರಡು ರೂಪದಲ್ಲಿರುತ್ತವೆ- ಎಂಡೋಪ್ಲಾಸ್ಮಿಕ್ ರೆಟಿಕುಲಮ್ (ಇ.ಪಿ.ಆರ್)ಎಂಬ ನೆರಿಗೆ-ಪದರದಂತಿರುವ ಕೋಶದ್ರವ cytoplasm) ದಲ್ಲಿರುವ ಘಟಕಗಳಿಗೆ ಅಂಟಿಕೊಂಡಿರುವ ರೈಬೋಸೋಮುಗಳನ್ನು ಅಂಟಿಕೊಂಡ ರೈಬೋಸೋಮುಗಳೆನ್ನುತ್ತೇವೆ..ಹಾಗೆಯೇ ಕೋಶದ್ರವದಲ್ಲಿ ಸ್ವತಂತ್ರವಾಗಿ ತೇಲಾಡುವ ರೈಬೋಸೋಮುಗಳು.. ಇ.ಪಿ.ಆರ್. ಗೆ ಅಂಟಿರುವ ರೈಬೋಸೋಮುಗಳ ಸಂಶ್ಲೇಷಿತ ಪ್ರೋಟೀನುಗಳ ಉಪಯೋಗ ಕೋಶದ ಒಳಗೂ ಹೊರಗೂ ಆಗುತ್ತೆ...ಅದೇ ಸ್ವತಂತ್ರ ರೈಬೋಸೋಮುಗಳಿಂದ ಸಂಶ್ಲೇಷಿತ ಪ್ರೋಟೀನುಗಳ ಪ್ರಯೋಗ ಕೋಶದ ಆಂತರಿಕೆ ಬೇಡಿಕೆಗೆ ಆಗುತ್ತದೆ. ಕೆಲವು ರೈಬೋಸೋಮುಗಳು ಕೋಶ ಕೇಂದ್ರಪದರದ (nucelar membrane) ಮೇಲೂ ಅಂಟಿಕೊಂಡಿರುತ್ತವೆ. ಇವುಗಳ ಸಂಶ್ಲೇಷಿತ ಪ್ರೋಟೀನುಗಳು ಕೇಂದ್ರದಲ್ಲಿನ ಕ್ರಿಯೆಗಳಿಗೆ ನೆರವಾಗುತ್ತವೆ.
ರೈಬೋಸೋಮುಗಳು ಎರಡು ಭಾಗ (ಚಿತ್ರ), ಹಿರಿ ಘಟಕ (large sub unit) ಮತ್ತು ಕಿರಿ ಘಟಕ (small sub unit) ಗಳಿಂದ ಕೂಡಿದ್ದು ಸಂಶ್ಲೇಷಣೆಯ ಸಮಯದಲ್ಲಿ ಒಂದರಮೇಲೊಂದು ಕೂಡಿಕೊಂಡು ಸಂಶ್ಲೇಷಣೆಯನ್ನು ಪ್ರಾರಂಭಿಸುತ್ತವೆ. ಈ ಎರಡು ಘಟಕಗಳ ಮಧ್ಯೆ ಸುದ್ದಿವಾಹಕ ಆರ್.ಎನ್.ಎ. (ಇದರಲ್ಲಿ ಯಾವ ರೀತಿಯ ಪ್ರೀಟಿನಿನ ತಯಾರಿಕೆಯಾಗಬೇಕು ಎಂಬ ಮಾಹಿತಿ ಅಡಕವಾಗಿರುತ್ತೆ) ಅದು ನ್ಯೂಕ್ಲಿಯೋಟೈಡ್ (ಸಂಕೇತ ರೂಪಗಳು) ಗಳನ್ನು ಹೊಂದಿರುತ್ತದೆ. ನ್ಯೂಕ್ಲಿಕ ಆಮ್ಲತಂತುಗಳು (ಡಿ.ಎನ್.ಎ. ಅಥವಾ ಆರ್.ಎನ್.ಎ, ಕ್ರಮವಾಗಿ ಡಿ ಆಕ್ಸಿ ರೈಬೋ ನ್ಯೂಕ್ಲಿಕ್ ಆಮ್ಲ ಮತ್ತು ಆಕ್ಸಿ ರೈಬೋ ನ್ಯೂಕ್ಲಿಕ್ ಆಮ್ಲ) ಇಂತಹ ನ್ಯೂಕ್ಲಿಯೋಟೈಡುಗಳನ್ನು ಸಂಕೇತದ ರೂಪದಲ್ಲಿ ಹೊಂದಿದ್ದು ಮೂರು ನ್ಯೂಕ್ಲಿಯೋಟೈಡುಗಳು ಒಂದು ರೀತಿಯ ಅಮಿನೋ ಆಮ್ಲಕ್ಕೆ ಸಂಕೇತ ನೀಡುತ್ತವೆ.
ಡಿ.ಎನ್.ಎ. ದಲ್ಲಿ ಥಯಮಿನ್, ಗ್ವಾನಿನ್, ಸೈಟೊಸಿನ್ ಮತ್ತು ಅಡಿನಿನ್ ಎಂಬ ನ್ಯೂಕ್ಲಿಯೋಟೈಡುಗಳಿದ್ದರೆ ಆರ್.ಎನ್.ಎ.ದಲ್ಲಿ ಥಯಮಿನ್ ಬದಲಿಗೆ ಯುರಾಸಿಲ್ ಇರುತ್ತದೆ. ಪ್ರೋಟೀನ್ ತಯಾರಿಕೆಯಲ್ಲಿ ಆರ್.ಎನ್.ಎ.ಗಳದ್ದೇ ಪಾರುಪತ್ಯ. ಇವುಗಳ
ಹೀಗೆ ಪ್ರೋಟೀನ್ ಮತ್ತು ಪ್ರೋಟೀನ್ ತಂತು ಸಂಶ್ಲೇಷಣೆ (ತಯಾರಿಕೆ) ಯಲ್ಲಿ ರೈಬೋಸೋಮುಗಳ ಪಾತ್ರ ಅನಿವಾರ್ಯ ಹಾಗಾಗಿ ರೈಬೋಸೋಮುಗಳ ಬಗ್ಗೆ ಅವುಗಳ ಕಾರ್ಯವೈಖರಿಯಬಗ್ಗೆ ಸಿಗುವ ಪ್ರತಿ ಮಾಹಿತಿಯೂ ಮಹತ್ವಪೂರ್ಣವಾಗಿರುತ್ತೆ. ಬ್ಯಾಕ್ಟಿರಿಯಾಗಳಲ್ಲಿಯೂ ರೈಬೋಸೋಮುಗಳ ಕಾರ್ಯ ಇದೇ..ಅಂದರೆ ಬ್ಯಾಕ್ಟೀರಿಯಾ ಪುನರುತ್ಪತ್ತಿಗೆ ಮೂಲವಾದ ಕೋಶದ ವಿವಿಧ ಪ್ರೋಟೀನುಗಳ ಸಂಶ್ಲೇಷಣೆ..ಬ್ಯಾಕ್ಟೀರಿಯಾ ಕೋಶಪದರದ ತಯಾರಿಕೆ ಇತ್ಯಾದಿ. ಬ್ಯಾಕ್ಟೀರಿಯಾ ನಮ್ಮಲ್ಲಿ ಉಂಟುಮಾಡುವ ರೋಗಗಳ ನಿಯಂತ್ರಣಕ್ಕೆ ಆಂಟಿಬಯೋಟಿಕ್ ಗಳ ಪ್ರಯೋಗ ಆಗುತ್ತಿದೆ...ಆದರೆ ಕೆಲವು ಬ್ಯಾಕ್ಟೀರಿಯಾಗಳು ಕೆಲವು ಆಂಟಿಬಯೋಟಿಕ್ ಗಳಿಗೆ ಕ್ಯಾರೇ..ಎನ್ನುವುದಿಲ್ಲ. ಆಂಟಿಬಯೋಟಿಕ್ ಗಳ ಮೂಲಕ್ರಿಯೆ ಬ್ಯಾಕ್ಟೀರಿಯಾಗಳ ರೈಬೋಸೋಮುಗಳ ಪ್ರೋಟೀನ್ ತಯಾರಿಕೆ ಕ್ರಿಯಯಲ್ಲಿ ಅಡ್ಡಿಯುಂಟುಮಾಡುವುದು ಇದರಿಂದ ಬ್ಯಾಕ್ಟೀರಿಯಾಗಳು ಪುನರುತ್ಪತ್ತಿ ಮಾಡಲಾಗದೇ ಸಾಯುತ್ತವೆ.
ಆದರೆ ಆಂಟಿಬಯೋಟಿಕ್ ಗಳಿಗೆ ವಿರೋಧ ಒಡ್ಡುವ ಬ್ಯಾಕ್ಟೀರಿಯಾಗಳಲ್ಲಿ ಆಂಟೀಬಯೋಟಿಕಗಳು ಬ್ಯಾಕ್ಟೀರಿಯಾ ರೈಬೋಸೋಮಿನ ಕಡೆ ಬರದಂತೆ ತಡೆಯುವ ವಸ್ತುಗಳನ್ನು (ಸ್ರಾವಕ) ಉತ್ಪಾದಿಸುವ ಸಾಮರ್ಥ್ಯ ಹುಟ್ಟಿಕೊಳ್ಳುತ್ತದೆ. ಈ ಸ್ರಾವಕಗಳು ಆಂಟೀಬಯೋಟಿಕ್ ಗಳನ್ನು ನಿಷ್ಪ್ರಯೋಜಕಗೊಳಿಸುತ್ತವೆ ಹಾಗಾಗಿ ಬ್ಯಾಕ್ಟಿರಿಯಾ ಪುನರುತ್ಪತ್ತಿ ರೋಗ ನಿಯಂತ್ರಣಕ್ಕೆ ಬರುವುದಿಲ್ಲ...ವೆಂಕಟರಾಮನ್ ರಾಮಕೃಷ್ಣನ್ ರ ಸಂಶೋಧನೆ ಈ ಬ್ಯಾಕ್ಟೀರಿಯಾಗಳ ರೈಬೋಸೋಮುಗಳು ಹೇಗೆ ಆಂಟಿಬಯೋಟಿಕ್ ಗಳನ್ನು ನಿಷ್ಕ್ರಿಯಗೊಳಿಸುತ್ತವೆ ಎಂಬುದನ್ನು ಕಂಡುಹಿಡಿಯಲು ಸಹಾಯಕವಾಗುವ ಸಂಶೋಧನೆ. ಇದರ ಉಪಯೋಗದಿಂದ ಆಂಟಿಬಯೋಟಿಕ್ ಗಳನ್ನು ಹೇಗೆ ಪ್ರಭಾವಶಾಲಿಗಳನ್ನಾಗಿಸಬಹುದು ಎಂದು ತಿಳಿಯಬಹುದು.
ಇದು ರೈಬೋಸೋಮುಗಳ ಕಾರ್ಯವಿಧದ ಸಂಕ್ಷಿಪ್ತ ಪರಿಚಯ..
(ನಿಮ್ಮ ಅನಿಸಿಕೆ..ಪ್ರಶ್ನೆ...ಸಂದೇಹಗಳಿಗೆ..ಸ್ವಾಗತ....ತಿಳಿದವರು ತಪ್ಪಿದ್ದರೆ ತಿದ್ದಿದರೆ ಇನ್ನೂ ಉತ್ತಮ)
9 comments:
ಸರ್ ಸೃಷ್ಟಿಯ ಅದ್ಭುತ ಕ್ರಿಯೆ "ಪ್ರೋಟೀನ್ ಸಿಂಥೆಸಿಸ್ " ಹೇಗಾಗುತ್ತದೆಂಬುದನ್ನು ಚೆನ್ನಾಗಿ ತಿಳಿಸಿದ್ದೀರಿ . ಲೇಖನದ ಕೊನೆಯ ಭಾಗದಲ್ಲಿ ನನಗೊಂದು ಸಂದೇಹವಿದೆ. "ಆಂಟಿಬಯೋಟಿಕ್ ಗಳ ಮೂಲಕ್ರಿಯೆ ಬ್ಯಾಕ್ಟೀರಿಯಾಗಳ ರೈಬೋಸೋಮ್ ಗಳ ಪ್ರೋಟೀನ್ ತಯಾರಿಕಾ ಕ್ರಿಯೆಯಲ್ಲಿ ಅಡ್ಡಿಯುಂಟುಮಾಡುವುದು. ಇದರಿಂದ ಬ್ಯಾಕ್ಟೀರಿಯಾಗಳು ಪುನರುತ್ಪತ್ತಿ ಮಾಡಲಾಗದೆ ಸಾಯುತ್ತವೆ." ಈ ವಾಕ್ಯದ ನಂತರ "ಹಾಗಾಗಿ ರೋಗ ನಿಯಂತ್ರಣಕ್ಕೆ ಬರುವುದಿಲ್ಲ...... " ಎಂದಿದೆಯಲ್ಲ ಸರ್ ಅದು ಹೇಗೆ ತಿಳಿಯುತ್ತಿಲ್ಲ. ಬ್ಯಾಕ್ಟೀರಿಯಾ ಪುನರುತ್ಪತ್ತಿ ಮಾಡಲಾಗದಿದ್ದಾಗ ರೋಗ ನಿಯಂತ್ರಣಕ್ಕೆ ಬರಬೇಕಲ್ಲವೆ?
ಸುಮ, ನಿಮ್ಮ attentiveness ಗೆ ಮೆಚ್ಚುಗೆ ನನ್ನದು...very good character of a good student...!!
ಹೌದು ಪೋಸ್ಟ್ ಮಾಡಿ preview ನಲ್ಲಿ ತಿಳಿಯಿತು...ಆದ್ರೆ ಸರಿಮಾಡಲು ಸಮಯ ಇರಲಿಲ್ಲ..ಹಾಗೇ ನೋಡೋಣ ಪ್ರತಿಕ್ರಿಯೆ ಹೇಗಿರುತ್ತೋ ಎನ್ನುವ ಹುಚ್ಚುಕುತೂಹಲ...ಸಾರಿ...
ಈಗ ನೋಡಿ ಸರಿ ಮಾಡಿದ್ದೇನೆ..ನಿಮ್ಮ ಪುನಃ ಪ್ರತಿಕ್ರಿಯೆ..ಮತ್ತೊಂದು ಪ್ರಶ್ನೆಗೂ ನಾನು ರೆಡಿ...
ಹ...ಹ..ಹ.. ಹಾಗಾದ್ರೆ ನಿಮ್ಮ ಪರೀಕ್ಷೆಯಲ್ಲಿ ನಾನು ಪಾಸ್ ಆಗಿದ್ದೇನ??...ಇಂತಹ ಕ್ಲಿಷ್ಟ ವಿಚಾರವನ್ನು ಕನ್ನಡೀಕರಿಸಿದ್ದೀರಲ್ಲ ಸರ್ ಅಭಿನಂದನೆಗಳು.
ಸುಮ ಧನ್ಯವಾದ...ಓಹ್..ಸಂಶಯವೇ ಇಲ್ಲ...ಫಸ್ಟ್ ಕ್ಲಾಸ್ ಪಾಸ್...!!! ನನಗೆ ಪರ್ಯಾಯ ಶಬ್ದಗಳು ತಕ್ಷಣಕ್ಕೆ ಸಿಗುತ್ತಿಲ್ಲ...ವಿಜ್ಞಾನ ಕನ್ನಡ ಶಬ್ದಕೋಶ ತಗೋಬೇಕು....
ನನ್ನದೊಂದು ಪುಸ್ತಕದ ವಿಚಾರವಿದೆ..ಪ್ರಾಣಿಪ್ರಪಂಚದ ವಿಸ್ಮಯಗಳು....
ನನ್ನ ಕೆಲವು ಅನಿಸಿಕೆ ನಿಮ್ಮೊಂದಿಗೆ ಹಂಚಿಕೊಳ್ಳುವ ವಿಚಾರ ಚರ್ಚಿಸಬಹುದೇ..?
ನನ್ನ e-mail, azadis@hotmail.com ಗೆ ಮಿಂಚೆ ಕಳುಹಿಸಿ ನಿಮಗೆ ಅಭ್ಯಂತರ ಇಲ್ಲವೆಂದರೆ.
late comer asks sorry!! ತುಂಬಾ ಸಂಕ್ಷಿಪ್ತವಾಗಿ protein synthesis ತಿಳಿಸಿದ್ದೀರ.. ಕನ್ನಡೀಕರಿಸುವಾಗ ಆವರಣದಲ್ಲಿ ಇಂಗ್ಲೀಷಿನಲ್ಲಿ ತಿಳಿಸಿದರೆ ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ. ಸರಳವಾಗಿ ಅರ್ಥವಾಯಿತು :)
ರೋಪಶ್ರೀ, ನಿನ್ನ ಮಾತು ನನಗೆ ಬ್ಲಾಗ್ ಪೋಸ್ಟ್ ಮಾಡುವಾಗ ಅನ್ನಿಸಿತು...ಆದ್ರೆ..ಅದೇಕೋ ಮತ್ತೆ ಸುಮ್ಮನಾದೆ...ನಿಜ ಒಮ್ಮೆಗೇ ಕನ್ನಡ ಪದಗಳು...ಅದರ ಸಮಾನಾರ್ಥ ಹೊಂದಿಸಿಕೊಂಡು ಅರ್ಥೈಸಿಕೊಳ್ಳುವುದು ಕಷ್ಟದ ಕೆಲಸ.......thanks for your reponse,,,,
good 2 know abt d kannada words for hormones, enzymes, and peptides..
Post a Comment