Wednesday, September 23, 2009

ಮೀನುಗಳು---ಅಬ್ಬಾ..ಎಂಥ ಮೀನುಗಳು...!!

ಮೀನುಗಳು, ಜಲಕನ್ಯೆಯರು, ಮತ್ಸ್ಯಾವತಾರ ಹೀಗೆ ನಮ್ಮೊಂದಿಗೆ ನಮ್ಮ ಪರಂಪರೆಯೊಂದಿಗೆ ಹಾಸು ಹೊಕ್ಕಾಗಿರುವ ಜೀವಿಗಳು. ಮಾನವನ ಜೀವವಿಕಾಸ ಸರಣಿಯ ಶ್ರಂಖಲೆಯಲ್ಲಿ ಬಹು ಮುಖ್ಯ ಕೊಂಡಿ..ಈ ಮೀನುಗಳು. ಬೆನ್ನುಮೂಳೆಯ ಪ್ರಥಮ ಅವತರಣ ಮೀನಿನಲ್ಲಾಯಿತು. ಅದೇ ಕಾರಣಕ್ಕೆ ಮಾನವ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಮೂಲವನ್ನು ಹುಡುಕಲು ಹೋದರೆ...ಮೀನು ಸಂಶೋಧನಾ ಯೋಗ್ಯ ಎಂದು ಶಾಸ್ತ್ರವೇತ್ತರು ಮೀನನ್ನು ಸಂಶೋಧನೆಗಳಿಗೆ ಬಳಸಲಾಗುತ್ತಿದೆ.

ಇನ್ನು ಮೀನುಗಳ ವಿಕಾಸದಲ್ಲೂ ಬಹು ಮಹತ್ತರ ತಿರುವುಬಂದದ್ದು...ಮೃದ್ವಸ್ಥಿ (ಕಾರ್ಟೀಲೇಜ್..ಮೆದು ಮೂಳೆ) ಮೀನುಗಳ ವಿಕಾಸ ನಂತರ ಸಹಜಸ್ಥಿ (ಟ್ರೂ ಬೋನ್) ಹೊಂದಿದ ಮೀನುಗಳು. ಮುದ್ವಸ್ಠಿ ಮೀನುಗಳು ಎಂದರೆ ಒಡನೆಯೇ ನೆನೆಪಾಗುವುದು ಶಾರ್ಕ್ ಮೀನು. ಬಹುಶಃ ಜಲಜೀವಿಗಳಲ್ಲಿ ವಿಖ್ಯಾತ ಮತ್ತು ಕುಖ್ಯಾತವಾಗಿರುವ ಜೀವಿ ಎಂದರೆ ಶಾರ್ಕ್ ಮೀನು. ಬಹುಪಾಲು ಮೃದ್ವಸ್ಥಿಗಳು ಸಮುದ್ರಗಳಲ್ಲೇ ಕಂಡುಬರುತ್ತವೆ (ಶಾರ್ಕ್ ಗಳ ಬಗ್ಗೆ ಇನ್ನೊಮ್ಮೆ ಬರೆಯುವೆ..). ಶಾರ್ಕ್ ಜಾತಿಗೆ ಸೇರಿದ ಸ್ಕೇಟ್ ಮತ್ತು ರೇ ಮೀನುಗಳೂ ಮೃದ್ವಸ್ಥಿಗಳೇ.

ಇನ್ನು ಸಹಜಸ್ಥಿ ಮೀನುಗಳು, ಕೆರೆ, ಕುಂಟೆ, ಹೊಂಡ, ಕುಂಟೆ, ಸರೋವರ, ನದಿ, ನಾಲೆ, ಜಲಾಶಯ ಅಲ್ಲದೇ ಹಿನ್ನೀರು, ಚೌಳುಪ್ಪುನೀರು, ಸಮುದ್ರ ತಟಗಳು, ಆಳ ಸಮುದ್ರ, ಅಷ್ಟೇ ಏಕೆ...ಹಿಮಾವೃತ ಅಂಟಾರ್ಟಿಕಾದಲ್ಲೂ ಕಂಡುಬರುತ್ತವೆ.

ಇವುಗಳಲ್ಲಿನ ಕೆಲವು ವೈವಿಧ್ಯಗಳ ಸ್ಥೂಲ ಪರಿಚಯವೇ ಈ ಲೇಖನ.

ಚುಕ್ಕೆ ಬಾಲದ ಸಮುದ್ರ ಸಿಂಹ: ಸಮುದ್ರ ಸಿಂಹಗಳು ಬಹು ಮನೋಹಕ ಮೀನುಗಳಲ್ಲಿ ಪ್ರಮುಖವಾದುವು. ಇವುಗಳ ರೆಕ್ಕೆಮುಳ್ಳು ವಿಷಯುಕ್ತವಾಗಿದ್ದು ಇವುಗಳ ದೇಹವಿನ್ಯಾಸ ಒಂದುರೀತಿಯ ಅಪಾಯ ಸೂಚಕ




ಹಾರುವ ಗುರ್ನಾರ್ಡ ಮೀನು: ಸಮುದ್ರ ತಲದಲ್ಲಿ ಹಾರಾಡುವಂತೆ ಈಜಾಡುವ ಮೀನುಗಳಿವು. ಕೆರೆಬ್ಬಿಯನ್ ದ್ವೀಪಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಸಮುದ್ರ ಮೇಲ್ಪದರಗಳಲ್ಲಿ ಕಾಣಸಿಗುವ ಹಾರಾಡುವ ಮೀನುಗಳಿಗಿಂತ ವಿಭಿನ್ನ.



ಹಾವಿನಂತಿರುವ ಮೊರೆ ಈಲ್ ಮೀನು: ಸಮುದ್ರ ತಲದ ಕೋರಲ್ಕಾಡಿನ ಬಹು ನಿಷ್ಣಾತ ಬೇಟೆಗಾರ. ಇದರ ಮಚ್ಚೆಗಳು ಕೋರಲ್ಗಳ ಅವಿತಾಗ ತನ್ನನ್ನು ಗುರುತಿಸದಂತೆ ಮಾಡಿಕೊಂಡು ಮೀನನ್ನು ಬೇಟೆಯಾಡುತ್ತದೆ.


ಪಾರ್ಕುಪೈನ್ ಮೀನು: ನೋಡಲು ವಿಚಿತ್ರವಾಗಿದ್ದು ಸ್ವರಕ್ಷಣಾ ಸಾಮರ್ಥ್ಯದ ಅಮೋಘ ನಮೂನೆಯನ್ನು ಹೊಂದಿದೆ. ಇದು ವೈರಿಯನ್ನು ಕಂಡರೆ ನೀರನ್ನು ಕುಡಿದು ಒಮ್ಮೆಗೇ ಊದಿಕೊಂಡು ಗಾಬರಿ ಹುಟ್ಟಿಸುತ್ತೆ ಅಲ್ಲದೇ ಅದರ ಚೂಪಾದ ಮುಳ್ಳುಗಳು ತಿನ್ನಲು ಬರುವ ಮೀನಿಗೆ ಕಂಟಕಪ್ರಾಯವಾಗಿರುತ್ತೆ.

9 comments:

Dileep Hegde said...

ಜಲ ನಯನ ಸರ್ ..
ಅಬ್ಬಾ..! ಎಂಥ ಮೀನುಗಳು...!
ಕಡಲ ಗರ್ಭದಲ್ಲಿ ಅದೆಷ್ಟು ವಿಸ್ಮಯಗಳು ಅಡಗಿವೆಯೋ...
ಮೀನುಗಳ ಬಗೆಗಿನ ಮಾಹಿತಿ ನಿಜಕ್ಕೂ ಅದ್ಭುತ ವಾಗಿದೆ..

ಜಲನಯನ said...

ದಿಲೀಪ್, ಧನ್ಯವಾದ ನಿಮಗೂ ಆಸ್ಕ್ತಿಯಿದೆಯೆನ್ನಿ ಜಲಜೀವನದ ಬಗ್ಗೆ...ನನ್ನ ಮುಂದಿನ ಕಂತುಗಳಲ್ಲಿ..ಇವುಗಳ ವಿಸ್ಮಯಗಳನ್ನು ತಿಳಿಸುವ ಮಾಹಿತಿ ಕೊಡಬೇಕೆಂದುಕೊಂಡಿದ್ದೇನೆ..

ಜಲನಯನ said...
This comment has been removed by the author.
ಜಲನಯನ said...
This comment has been removed by the author.
ಸುಮ said...

ಅದ್ಭುತ!! ಸರ‍್. ಜೀವಿಗಳಲ್ಲಿರುವ adoptations ಗಳಲ್ಲಿ ಎಷ್ಟೊಂದು ವೈವಿಧ್ಯತೆಯಿದೆಯಲ್ಲವೆ? ಇನ್ನೂ ಹೆಚ್ಚು ಇಂತಹ ವಿಷಯಗಳ ಬಗ್ಗೆ ಬರೆಯಿರಿ ಸರ‍್.

ಸೀತಾರಾಮ. ಕೆ. / SITARAM.K said...

ಸರಿ ಸುಮಾರು ೨.೮ ಬಿಲಿಯನ್ ವರ್ಷಗಳ ಹಿ೦ದೆಯೇ ಭುವಿಯಲ್ಲಿ ಕಾಣಿಸಿಕೊ೦ಡ ಜೀವಿ ಮೀನು. ಅ೦ದಿನಿ೦ದ ಇ೦ದಿನವರೆಗೆ ಭುವಿಯ ಹಲವಾರು ವೈಪರೀತ್ಯಗಳ ನಡುವೆಯೂ, ಪರಿಸರ ಬದಲಾವಣೆ ನಡುವೆಯೂ, ಭುವಿಯ -ಭುಕ೦ಪನ, ಜ್ವಲಾಮುಖಿ ಸಿಡಿತ, ಭು-ತಟ್ಟೆಗಳ ಚಲನೆ, ಧ್ರುವ ಬದಲಾವಣೆ, ಪರ್ವತಗಳ ಉತ್ಖನನಗಳು, ಉಲ್ಕಾಪಾತ- ಈ ಎಲ್ಲವುಗಳ ನಡುವೆಯೂ ತಮ್ಮ ಅಸ್ಥಿತ್ವವಷ್ಟೇ ಉಳಿಸಿಕೊಳ್ಳುವದಲ್ಲದೇ ವಿಭಿನ್ನ ಶಾರೀರ ವಿಕಸನಕ್ಕೊಳಗಾಗಿ ಸಹಸ್ರಾರು ಪ್ರಭೇದಗಳ ವೈವಿಧ್ಯ ಹೊ೦ದಿದ ಜೀವಿ. ಅವುಗಳ ಪಳೆಯುಳಿಕೆಗಳ ಅಧ್ಯಯನ ಭೂಗರ್ಭ ವಿಜ್ಞಾನಿಗಳಿಗೆ ಕಲ್ಲುಗಳ ಅಯುಷ್ಯ ಲೆಕ್ಕಚಾರಕ್ಕೆ ಉಪಯುಕ್ತ ಮಾಹಿತಿ. ಅವುಗಳ ಅ೦ಗರಚನಾ ಶಾಸ್ತ್ರ ಕಾಲಕಾಲಕ್ಕೆ ತಕ್ಕ೦ತೆ ಬದಲಾಗುತ್ತ ಬ೦ದಿದೆ. ಆ ಬದಲಾವಣೆಗಳೇ ಕಾಲಮಾನಕ್ಕೆ ದಿಕ್ಸುಚಿ. ಮೀನಿನ ಅಹಲವಾರು ಪ್ರಭೇಧಗಳ ಪರಿಚಯ ಮಾಡಿಕೊಟ್ಟ ತಮ್ಮ ಲೇಖನ ಚೆನ್ನಾಗಿ ಮೂಡಿ ಬ೦ದಿದೆ.ಜೊತೆಗೆ ಸು೦ದರ ಛಾಯಚಿತ್ರಗಳು. ಧನ್ಯವಾದಗಳು ಜಲನಯನರವರೇ.

ಜಲನಯನ said...

ಸುಮ, ನಿಮ್ಮ ಆಸಕ್ತಿ ಪ್ರಾಣಿಗಳು, ಪರಿಸರ ಮುಂತಾದುವುಗಳಲ್ಲಿರುವುದು ನಿಮ್ಮ ಪದವಿಯ ಪ್ರಭಾವ ಎನ್ನುವುದಕ್ಕಿಂತ..ಸ್ಪಮ್ದಿಸುವ ಮನೋಭಾವ ಎನ್ನಬಹುದು.
ನಿಮ್ಮ ಅನಿಸಿಕೆಗಳು ಮತ್ತು ಕಾಮೆಂಟಿಗೆ ಧನ್ಯವಾದಗಳು...

ಜಲನಯನ said...

ಶಿವರಾಮ್ ಸರ್, ನನ್ನ ಲೇಖನಕ್ಕೆ ಪೂರಕ ಮಾಹಿತಿ ಒದಗಿಸಿ ಅದರ ಮೌಲ್ಯವನ್ನು ವೃದ್ಧಿಸಿದ್ದೀರಿ, ಧನ್ಯವಾದಗಳು. ಮೀನು ಜೀವವಿಕಾಸ ಸರಣಿಯ ಬಹುಮುಖ್ಯ ಕೊಂಡಿಯಾಗಿರುವ ಕಾರಣ ಮಾನವ ವಂಶವಾಹಕಶಾಸ್ತ್ರ (gentics) ಕ್ಕೆ ಬಹು ಉಪಯುಕ್ತ ಮಾಹಿತಿಯನ್ನು ಕೊಡುತ್ತಿವೆ. ಪಫರ್ ಮೀನಿನ ವಂಶವಾಹಕಗಳ ನಕ್ಷೆಯನ್ನು ಮಾನವ ವಂಶವಾಹಕಗಳ ನಕ್ಶ್ಕೆಯೊಂದಿಗೆ ಸರಿದೂಗಿಸಿ ಹಲವಾರು ವಿಷಯಗಳಲ್ಲಿ ಮೀನು ಸಹಾಕಾರಿಯಾಗಬಹುದೆಂದು ತೋರಿಸಲಾಗಿದೆ.

ಜಲನಯನ said...

Please see my next blog post on
PRIDE of INDIA