Friday, March 4, 2011

Sharks (ಶಾರ್ಕುಗಳು)----ಚಿತ್ರ ಮಾಹಿತಿ ಮಾಲಿಕೆ...ಎರಡು

ಶಾರ್ಕ್ ಜಾತಿಯ ಸಹಜೀವಿಗಳು - ರೇ ಮತ್ತು ಸ್ಕೇಟ್ ಮೀನುಗಳು
ಇವೂ ಮೃದ್ವಸ್ತಿ ಮೀನುಗಳು. ಆದರೆ ಇವುಗಳ ಆಕಾರ ವಿಭಿನ್ನವಾಗಿರುತ್ತದೆ.
ಇವುಗಳ ಬಗ್ಗೆ ಹೇಳುವುದಕ್ಕೆ ಮುಂಚೆ ಶಾರ್ಕ್ ಮೀನಿನ ಕೆಲವು ವೈವಿಧ್ಯಗಳನ್ನು ತಿಳಿಸಲೇ ಬೇಕು.
ಇವೇ ಸುತ್ತಿಗೆ ತಲೆ ಶಾರ್ಕ್ ಮತ್ತು ಗರಗಸ ಮೂತಿಯ ಶಾರ್ಕ್

ಚಿತ್ರ ಕೃಪೆ: ict.mic.ul.ie

(source: web on sharks)
Hammer Headed Shark ಅಥವಾ ಸುತ್ತಿಗೆ ತಲೆಯ ಶಾರ್ಕ್, ಸುಮಾರು ೨೦ ಅಡಿ ಉದ್ದದವರೆಗೂ ಬೆಳೆಯುತ್ತದೆ, ಇದರಲ್ಲಿ ಒಂದೆರಡು ಪ್ರಬೇಧಗಳು ಮಾನವನಿಗೆ ಅಪಾಯಕಾರಿ ಎಂದು ತಿಳಿದುಬಂದಿದೆ.

ಇನ್ನು ಗರಗಸ ಶಾರ್ಕ್ ಇನ್ನೊಂದು ವಿನೂತನ ಶರೀರ ರೂಪ ಹೊಮ್ದಿದ ಶಾರ್ಕ್. ಇದರ ತಲೆಯ ಮುಂಭಾಗ ಚೂಪಾಗಿ ಮಾರ್ಪಟ್ಟಿದ್ದು ಆ ಭಾಗ ಗರಗಸವನ್ನು ಹೋಲುತ್ತದೆ.

ಹೀಗೇ ಹಲವಾರು ಜಾತಿಯ ಶಾರ್ಕುಗಳಿದ್ದು,,,ಒಮ್ದು ಅಧ್ಯಯನದ ಪ್ರಕಾರ ೪೫೦ ಕ್ಕೂ ಮಿಕ್ಕು ಶಾರ್ಕ್ ಪ್ರಬೇಧಗಳಿವೆ ಎಂದು ತಿಳಿದು ಬಂದಿದೆ.
................................................................................ಇನ್ನೂ ಈ ಮೀನುಗಳ ವಿಧಗಳ ವಿವರ ಮುಂದಿನ ಕಂತಿನಲ್ಲಿ..