ಎಪಾಲುಟ್ ಶಾರ್ಕಿನ ಬಾಯಿಯ ಮಾರ್ಪಾಡು
ಎಪಾಲುಟ್ ಶಾರ್ಕ್
The epaulette shark (Hemiscyllium ocellatum) is a species of longtailed carpet shark, family Hemiscylliidae, found in shallow, tropical waters off Australia and New Guinea (and possibly elsewhere). The common name of this shark comes from the very large, white-margined black spot behind each pectoral fin, which are reminiscent of military epaulettes. A small species usually under 1 m (3.3 ft) long, the epaulette shark has a slender body with a short head and broad, paddle-shaped paired fins. The caudal peduncle (to which the tail fin is attached) comprises over half the shark's length. Adults are light brown above, with scattered darker spots and indistinct saddles.
Epaulette sharks have nocturnal habits and frequent shallow water on coral reefs or in tidal pools. This shark has evolved to cope with the severe nighttime oxygen depletion (hypoxia) in isolated tidal pools by increasing the blood supply to its brain and selectively shutting down non-essential neural functions. It is capable of surviving complete anoxia for an hour without ill effects, and at a much higher temperature than most other hypoxia-tolerant animals. Rather than swim, epaulette sharks "walk" by wriggling their bodies and pushing with their paired fins. This species feeds on a wide range of small benthic invertebrates and bony fishes. Epaulette sharks are oviparous, with females depositing pairs of egg capsules around every 14 days from August to December. Due to their hardiness and small size, epaulette sharks are popular with both public and home aquaria. The International Union for Conservation of Nature (IUCN) has assessed this species as of Least Concern, as outside of the small aquarium trade it is of little interest to fisheries.
ನಡೆದಾಡುವ ಶಾರ್ಕ್ : ಎಪಾಲುಟ್ ಶಾರ್ಕ್
ಕೋರಲ್ ಕಾಡು ನಮ್ಮ ಭೂಮಿ ಮೇಲಿನ ಕಾಡಿನಂತೆಯೇ ವೈವಿಧ್ಯಮಯ ಜಗತ್ತು ಅದು ತನ್ನ ಸ್ವಭಾವದ್ದು. ಕೋರಲ್ ಕ್ಯಾಲ್ಸಿಯಂ ಕಾರ್ಬೊನೇಟ್ ಯಥೇಚ್ಛವಾಗಿ ಸ್ರವಿಸಲ್ಪಟ್ಟ ಜೀವಿಗಳ ವಾಸಗೂಡು. ಅಲ್ಲದೇ ಇಲ್ಲಿ ಸಮುದ್ರ ತಲದ ಸಸ್ಯಗಳೂ ಇರುತ್ತವೆ. ಇವುಗಳಲ್ಲಿ ಹಲವು ದ್ವಿತಿಸಂಶ್ಲೇಷಣಾ ಕ್ರಿಯೆ (ಹರಿತ್ತಿನ ಪ್ರಯೋಗದಿಂದ) ಮೂಲಕ ತಮ್ಮ ಆಹಾರವನ್ನು ಗಿಟ್ಟಿಸಿಕೊಂಡರೆ ಕೆಲ ಸಸಿಗಳು ಸಮುದ್ರದ ಅಗಾಧ ರಾಸಾಯನಿಕಗಳನ್ನು ಬಳಸಿಕೊಂಡು ಆಹಾರೋತ್ಪಾನೆ ಮಾಡಿಕೊಳ್ಳುತ್ತವೆ ಹಾಗಾಗಿ ಈ ಜಾತಿಯ ಸಸ್ಯಗಳಿಗೆ ಸೂರ್ಯನ ರಶ್ಮಿಯ ಅಗತ್ಯತೆ ಇರುವುದಿಲ್ಲ. ಕೋರಲ್ ಮತ್ತು ಸಸ್ಯಗಳಿದ್ದೆಡೆ ಇತರ ಜೀವಿಗಳೂ ವಾಸವಾಗೋದು ಸಹಜ. ಚಿಪ್ಪು ಮೀನು (ಶೆಲ್ ಫಿಶ್), ಅಕ್ಟೋಪಸ್, ಏಡಿ, ಸಿಗಡಿ, ಚಿಕ್ಕ, ಮಧ್ಯಮ ದೊಡ್ದ ಮತ್ತು ಅತಿ ದೊಡ್ದ ಗಾತ್ರದ ಮೀನು ಎಲ್ಲಾ ಕಾಣಸಿಗುತ್ತವೆ. ಇಲ್ಲಿ ಶಾರ್ಕ್ ಗಳಿಗೆ ಔತಣ ಯಾವಾಗಲೂ....ಇಂತಹ ಪರಿಸರದಲ್ಲೇ.. ಇರುವ ವೈವಿಧ್ಯಮಯ ಜೀವ ಸಂಕುಲ ವಿಜ್ಞಾನಿಗಳಿಗೆ ಸಧಾ ಸಂಶೋಧನೆಯ ಕೇಂದ್ರಬಿಂದುಗಳಾಗಿವೆ.
ನಡೆದಾಡುವ ಶಾರ್ಕ್...!!
ನಿಮಗೆ ಶಾರ್ಕ್ ಎಂದೊಡನೆ ವೇಗವಾಗಿ ಈಜುತ್ತಾ ಮೀನನ್ನು ಕಚ್ಚಿ ಓಡುವ ಶಾರ್ಕ ಚಿತ್ರ ಕಣ್ಣ ಮುಂದೆ ಬರುತ್ತದೆ... ನಡೆದಾಡುವ ಶಾರ್ಕ್ ..??!! ಇದು ನಿಜವೇ ಎನಿಸಬಹುದು.... ಹೌದು ನಿಜ..
ಈ ಶಾರ್ಕಲ್ಲಿ ಕಿವಿರಸೀಳಿನ ಕೆಳಭಾಗದ ರೆಕ್ಕೆಗಳು ನಡೆಪಾದದಂತೆ ಮಾರ್ಪಾಡುಗೊಂಡಿರುತ್ತವೆ. ಕೆಲ ಬೀಚ್ ಗೆ ಹೋಗುವ ಹವ್ಯಾಸವುಳ್ಲವರು "ಮಡ್ ಸ್ಕಿಪ್ಪರ್" ಎಂಬ ಮೀನನ್ನು ನೋಡಿರಬೇಕು. ಇದು ತನ್ನ ರೆಕ್ಕೆಗಳ ಸಹಾಯದಿಂದ ನಡೆದು ಬೀಚಿನ ಮೇಲೆ ಓಡಾಡುತ್ತದೆ...!!! ಇದೇ ತೆರನಾದ ಮಾರ್ಪಾಡು ಈ ನಡೆದಾಡುವ ಶಾರ್ಕಿನದು.
ಆಷ್ಟ್ರೇಲಿಯಾ ರಾಷ್ಟ್ರದ ಸಮುದ್ರದ ಸುತ್ತಮುತ್ತಲ ಸಮುದ್ರದ ಪರಿಸರಗಳಲ್ಲಿ ಕಂಡುಬರುವ ಈ ಮೀನು ಹೆಚ್ಚು ಆಳದ ನೀರಿಗೆ ಹೋಗುವುದಿಲ್ಲ. ಇದು ಗಾತ್ರದಲ್ಲಿ ಮಾಮೂಲಿ ಮೀನಿನಂತೆ ಕಂಡು ಬರುತ್ತದೆ ಮತ್ತು ವಯಸ್ಕ ಮೀನು ಸುಮಾರು ೩೦-೮೦ ಸೆಂ.ಮೀ. ಗೂ ಮೀರಿರುವುದಿಲ್ಲ. ಹಾಗಾಗಿ ಇದು ಇತರೆ ದೊಡ್ದ ಮೀನಿಗೆ ಅಥವಾ ಇತರೆ ಶಾರ್ಕ್ ಗಳಿಗೆ ಆಹಾರವಾಗುವ ಸಾಧ್ಯತೆ ಹೆಚ್ಚು. ಈ ಕಾರಣದಿಂದ ಎಪಾಲುಟ್ ಶಾರ್ಕ್ ಅದ್ಭುತ ದೇಹವರ್ಣಮಾರ್ಪಾಡಿನ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ತನ್ನ ಮೈಮೇಲಿನ ಮಚ್ಚೆಗಳು ಹಾಗೂ ವರ್ಣವಿನ್ಯಾಸ ಇದನ್ನ ತನ್ನ ಪರಿಸರದ ಹಿನ್ನೆಲೆಯಲ್ಲಿ ತನ್ನನ್ನು ಕಬಳಿಸಲು ಹೊಂಚುಹಾಕುವ ಮೀನುಗಳಿಂದ ರಕ್ಷಿಸುತ್ತದೆ. ಇವು ಮೊಟ್ಟೆ ಇಡುವ ಶಾರ್ಕಾಗಿದ್ದು ಒಮ್ಮೆಗೆ ಎರೆಡೆರಂತೆ ವರ್ಷಕ್ಕೆ ೩೦-೪೦ ಮೊಟ್ಟೆ ಇಡುತ್ತದೆ. ಮೊಟ್ಟೆಗಳು ಮೊದಲೇ ಗಂಡು ಶಾರ್ಕಿನಿಂದ ಫಲಗೊಂಡು ಹೊರಬರುತ್ತವೆ. ಹಾಗಾಗಿ ಇವು ಹಕ್ಕಿ ಜಾತಿಯ ಮೊಟ್ಟೆ ಮೂಲದ ಸಂತಾನಾಭಿವೃದ್ಧಿಯನ್ನು ಹೋಲುತ್ತದೆ. ಇವು ಸಾಮಾನ್ಯವಾಗಿ ನಿಶಾಚರಿಗಳಾಗಿದ್ದು ಚಿಕ್ಕ ಮೀನು, ಸಿಗಡಿ ಇತ್ಯಾದಿಯನ್ನು ತಿಂದು ಬದುಕುತ್ತವೆ. ಇನ್ನು ಇವುಗಳ ವಿಶೇಷತೆ ಎಂದರೆ ಅತಿ ಕಡಿಮೆ ಕರಗಿದ ಆಮ್ಲಜನಕವಿರುವ ನೀರಿನಲ್ಲೂ ನಾಲ್ಕೈದು ಗಂಟೆ ಆರಾಮವಾಗಿ ಓಡಾಡಬಲ್ಲವು. ಕೆಲವು ನಿದರ್ಶನಗಳಲ್ಲಿ ಆಮ್ಲಜನಕ ರಹಿತ ಪರಿಸ್ಥಿಗಳಲ್ಲಿ ಸುಮಾರು ಒಂದು ಗಂಟೆ ಕಾಲ ಜೀವಿಸಿದ್ದೂ ಉಂಟು. ಈ ಅಸಾಧಾರಣ ಸಾಮರ್ಥ್ಯದ ಗುಣ ವಿಶೇಷವನ್ನು ಶೋಧಿಸುತ್ತಿರುವ ವಿಜ್ಞಾನಿಗಳು ಮಾನವ ಶಸ್ತ್ರಕ್ರಿಯಾ ಪ್ರಕ್ರಿಯೆಯಲ್ಲಿ ಅಂಶದಿಂದ ಉಪಯೋಗ ಸಾಧ್ಯತೆಗಳನ್ನು ಸಂಶೋಧಿಸುತ್ತಿದ್ದಾರೆ.
ಮೀನುಗಳು ಕಶೇರುಕಗಳ ಮೊದಲ ಕೊಂಡಿಯಾಗಿರುವುದರಿಂದ ಮಾನವ ವೈದ್ಯಶಾಸ್ತ್ರದ ಪ್ರಮುಖ ಶೋಧನಾ ವಸ್ತುಗಳಾಗಿವೆ.