Saturday, December 11, 2010

Sharks (ಶಾರ್ಕುಗಳು)----ಚಿತ್ರ ಮಾಹಿತಿ ಮಾಲಿಕೆ...ಒಂದು

Sharks...



Sharks are the first links of vertebrates with the vertebrates
ಅಕಶೇರುಕಗಳನ್ನು ಕಶೇರುಕಗಳೊಂದಿಗೆ ಜೋಡಿಸುವ ಕೊಂಡಿಯೇ ಶಾರ್ಕುಗಳು..ಇವುಗಳಲ್ಲಿ ಸಹಜಸ್ತಿ (ಗಡಸು ಮೂಳೆ) ಇರದೆ ಇವನ್ನು ಮೃದ್ವಸ್ತಿಗಳೆಂದು ವಿಂಗಡಿಸಲಾಗಿದೆ.
It is well known that the evolutiona has passed through a very important link in animal life and these wonderful organisms provide many clues to the higher animals and notably the man, the intelligent animal, for his own good.

Let me introduce a few species of sharks to you and give some basic information (thanks to shark information.org)
ಇದನ್ನು ಮಾಹಿತಿ ಅಥವಾ ಮೂಲ ಜ್ಞಾನದ ಬಿತ್ತರಕ್ಕೆ ಪ್ರಯೋಗಿಸುತ್ತಿದ್ದೇನೆ..(ಕೃಪೆ: ಶಾರ್ಕ್ ಇನ್ಫರ್ಮೇಶನ್.ಆರ್ಗ್).

ಜಲಚರಗಳ ವಿಕಸನ ಸರಣಿಯ ಅಮೋಘ ಜೀವಿಗಳು ಶಾರ್ಕ್ ಜಾತಿಯ ಜೀವ ಸಂಕುಲ (ಮೃದ್ವಸ್ತಿಗಳು - Elasmobranchs)
The sharks, skates and rays constitute the Elasmobranch group and they form one of the most majestic life forms of the seas, though some of them may also be seen in the freshwater habitats.

ಶಾರ್ಕ್, ಸ್ಕೇಟ್ ಮತ್ತು ರೇ ಮೂರು ವಿಧದ ಮೀನುಗಳು ಇವುಗಳ ಗಾಂಭೀರ್ಯ ಅನಭಿಶಕ್ತತೆ ನೋಡುತ್ತಲೇ ವಿದಿತವಾಗುತ್ತದೆ. ಇವುಗಳಲ್ಲಿ ಹುರುಪೆ (ಸ್ಕೇಲ್) ವಿಶಿಷ್ಟ ರೀತಿಯ ಪ್ಲಕಾಯ್ಡ್ ಹುರುಪೆಗಳು...ತ್ರಿಭುಜಾಕಾರದ ಚೂಪು ಹುರುಪೆಗಳು ಮತ್ತು ಚರ್ಮ ಬಹು ಗಡಸು, ಒರಟು ಹಾಗೂ ದಪ್ಪ. ಈ ಮೀನುಗಳು ಕಿವಿರು ಸೀಳುಗಳ ಮೂಲಕ ನೀರನ್ನು ಒಳತೆಗೆದುಕೊಂಡು ಆಮ್ಲಜನಕವನ್ನು ಕಿವಿರು ಬಳ್ಳಿಗಳ ಮೂಲಕ ವಿನಿಮಯ ಮಾಯಿಕೊಂಡು ರಕ್ತಕ್ಕೆ ನೀಡುತ್ತವೆ (ಹಿರಿ ಪ್ರಾಣಿಗಳಲ್ಲಿರುವಂತೆ ಇವುಗಳಲ್ಲಿ ಶ್ವಾಸಕೋಶ ಇರುವುದಿಲ್ಲ ಕಿವಿರುಗಳು ಆ ಕೆಲಸ ಮಾಡುತ್ತವೆ). ಹಾಗೆಯೇ ಸಹಜಸ್ತಿ ಮೀನುಗಳಲ್ಲಿರುವಂತೆ ಇವುಗಲಲ್ಲಿ ಕಿವಿರುಕವಚ ಇರುವುದಿಲ್ಲ ಕಿವಿರುಗಳು ಸೀಳುಗಳಾಗಿದ್ದು ತೆರೆದಿರುತ್ತವೆ.

ಮೊದಲಿಗೆ ಕೆಲ ಪ್ರಬೇಧಗಲ ಪರಿಚಯ ಮಾದಿಕೊಂಡು ನಂತರ ಕೆಲವು ಸೂಕ್ಷ್ಮಗಳನ್ನು ತಿಳಿದು ಕೊಳ್ಳೋಣ.

೧. ಮಹಾನ್ ಶ್ವೇತ ಶಾರ್ಕ್ (Great White Shark)


ಇದು ಬಹಳ ಚರ್ಚಿತ (ಚಲನ ಚಿತ್ರದ ನಂತರ -ಜಾಸ್ ಮೂಲಕ) ಸಮುದ್ರ ಜೀವಿ. ಇದು ಸುಮಾರು ೩೫೦ ದಶ ಲಕ್ಷ ವರ್ಷಗಳ ಜೀವವಿಕಾಸ ಹಿನ್ನೆಲೆಯ ಅಮೋಘ ಜೀವಿ.
ಇದರ ವರ್ಗೀಕರಣ ಹೀಗಿದೆ
•Order: Lamniformes

ವರ್ಗ: ಲ್ಯಾಮಿನಿಫಾರ್ಮಿಸ್
•Family: Lamnidae
ಕುಟುಂಬ: ಲ್ಯಾಮ್ನಿಡೇ
•Genus: Carcharodon
ಜೀನಸ್: ಕಾರ್ಕರೋಡಾನ್
•Species: carcharias
ಪ್ರಬೇಧ: ಕಾರ್ಕಾರಿಯಸ್

•Scientific Name: Carcharodon carcharia
ವೈಜ್ಞಾನಿಕ ಹೆಸರು: ಕಾರ್ಕಾರಡಾನ್ ಕಾರ್ಕಾರಿಯ
(ಚಿತ್ರ ಕೃಪೆ: http://www.3.bp.blogspot.com/)

ಸಾಮಾನ್ಯವಾಗಿ ೪೦-೫೦ ವರ್ಷ ಆಯಸ್ಸಿನ ಈ ಮೀನು ೪ ರಿಂದ ೫ ಮೀಟರ್ ಸರಾಸರಿ ಉದ್ದವಿರುತ್ತದೆ (೬.೫ ಮೀ ಸಹಾ ಕಂಡು ಬಂದಿದೆ). ಇವು ೨೦೦೦ ದಿಂದ ೪೦೦೦ ಕೆ.ಜಿ. ತೂಕವಿರುತ್ತವೆ. ಇದರ ಮರಿ ಸುಮಾರು ೧ ರಿಂದ ೧.೫ ಮೀಟರ್ ಉದ್ದವಿರುತ್ತದೆ. ಒಂದು ಹೆಣ್ಣು ಒಮ್ಮೆಗೆ ೬-೧೦ ಮರಿಗಳನ್ನು ಹಾಕುತ್ತದೆ. ಶಾರ್ಕ ಒವೋವೈವಿಪ್ಯಾರಸ್ ಅಂದ್ರೆ ಮರಿಹಾಕುವ (ತಾಯಿ-ಮಗುವಿನ ಮಧ್ಯೆ ಪೋಷಣಾ ಸಂಪರ್ಕವಿಲ್ಲದ) ವಿಧಾನದ ಸಂತಾನೋತ್ಪತ್ತಿ ಮಾಡುತ್ತದೆ. ಹೆಣ್ಣು ಸಮಾನ್ಯವಾಗಿ ಗಂಡಿಗಿಂತ ಹೆಚ್ಚು ಗಾತ್ರವಿರುತ್ತದೆ.