Saturday, December 11, 2010
Sharks (ಶಾರ್ಕುಗಳು)----ಚಿತ್ರ ಮಾಹಿತಿ ಮಾಲಿಕೆ...ಒಂದು
Sharks are the first links of vertebrates with the vertebrates
ಅಕಶೇರುಕಗಳನ್ನು ಕಶೇರುಕಗಳೊಂದಿಗೆ ಜೋಡಿಸುವ ಕೊಂಡಿಯೇ ಶಾರ್ಕುಗಳು..ಇವುಗಳಲ್ಲಿ ಸಹಜಸ್ತಿ (ಗಡಸು ಮೂಳೆ) ಇರದೆ ಇವನ್ನು ಮೃದ್ವಸ್ತಿಗಳೆಂದು ವಿಂಗಡಿಸಲಾಗಿದೆ.
It is well known that the evolutiona has passed through a very important link in animal life and these wonderful organisms provide many clues to the higher animals and notably the man, the intelligent animal, for his own good.
Let me introduce a few species of sharks to you and give some basic information (thanks to shark information.org)
ಇದನ್ನು ಮಾಹಿತಿ ಅಥವಾ ಮೂಲ ಜ್ಞಾನದ ಬಿತ್ತರಕ್ಕೆ ಪ್ರಯೋಗಿಸುತ್ತಿದ್ದೇನೆ..(ಕೃಪೆ: ಶಾರ್ಕ್ ಇನ್ಫರ್ಮೇಶನ್.ಆರ್ಗ್).
ಜಲಚರಗಳ ವಿಕಸನ ಸರಣಿಯ ಅಮೋಘ ಜೀವಿಗಳು ಶಾರ್ಕ್ ಜಾತಿಯ ಜೀವ ಸಂಕುಲ (ಮೃದ್ವಸ್ತಿಗಳು - Elasmobranchs)
The sharks, skates and rays constitute the Elasmobranch group and they form one of the most majestic life forms of the seas, though some of them may also be seen in the freshwater habitats.
ಶಾರ್ಕ್, ಸ್ಕೇಟ್ ಮತ್ತು ರೇ ಮೂರು ವಿಧದ ಮೀನುಗಳು ಇವುಗಳ ಗಾಂಭೀರ್ಯ ಅನಭಿಶಕ್ತತೆ ನೋಡುತ್ತಲೇ ವಿದಿತವಾಗುತ್ತದೆ. ಇವುಗಳಲ್ಲಿ ಹುರುಪೆ (ಸ್ಕೇಲ್) ವಿಶಿಷ್ಟ ರೀತಿಯ ಪ್ಲಕಾಯ್ಡ್ ಹುರುಪೆಗಳು...ತ್ರಿಭುಜಾಕಾರದ ಚೂಪು ಹುರುಪೆಗಳು ಮತ್ತು ಚರ್ಮ ಬಹು ಗಡಸು, ಒರಟು ಹಾಗೂ ದಪ್ಪ. ಈ ಮೀನುಗಳು ಕಿವಿರು ಸೀಳುಗಳ ಮೂಲಕ ನೀರನ್ನು ಒಳತೆಗೆದುಕೊಂಡು ಆಮ್ಲಜನಕವನ್ನು ಕಿವಿರು ಬಳ್ಳಿಗಳ ಮೂಲಕ ವಿನಿಮಯ ಮಾಯಿಕೊಂಡು ರಕ್ತಕ್ಕೆ ನೀಡುತ್ತವೆ (ಹಿರಿ ಪ್ರಾಣಿಗಳಲ್ಲಿರುವಂತೆ ಇವುಗಳಲ್ಲಿ ಶ್ವಾಸಕೋಶ ಇರುವುದಿಲ್ಲ ಕಿವಿರುಗಳು ಆ ಕೆಲಸ ಮಾಡುತ್ತವೆ). ಹಾಗೆಯೇ ಸಹಜಸ್ತಿ ಮೀನುಗಳಲ್ಲಿರುವಂತೆ ಇವುಗಲಲ್ಲಿ ಕಿವಿರುಕವಚ ಇರುವುದಿಲ್ಲ ಕಿವಿರುಗಳು ಸೀಳುಗಳಾಗಿದ್ದು ತೆರೆದಿರುತ್ತವೆ.
ಮೊದಲಿಗೆ ಕೆಲ ಪ್ರಬೇಧಗಲ ಪರಿಚಯ ಮಾದಿಕೊಂಡು ನಂತರ ಕೆಲವು ಸೂಕ್ಷ್ಮಗಳನ್ನು ತಿಳಿದು ಕೊಳ್ಳೋಣ.
೧. ಮಹಾನ್ ಶ್ವೇತ ಶಾರ್ಕ್ (Great White Shark)
ಇದು ಬಹಳ ಚರ್ಚಿತ (ಚಲನ ಚಿತ್ರದ ನಂತರ -ಜಾಸ್ ಮೂಲಕ) ಸಮುದ್ರ ಜೀವಿ. ಇದು ಸುಮಾರು ೩೫೦ ದಶ ಲಕ್ಷ ವರ್ಷಗಳ ಜೀವವಿಕಾಸ ಹಿನ್ನೆಲೆಯ ಅಮೋಘ ಜೀವಿ.
ಇದರ ವರ್ಗೀಕರಣ ಹೀಗಿದೆ
•Order: Lamniformes
ವರ್ಗ: ಲ್ಯಾಮಿನಿಫಾರ್ಮಿಸ್
•Family: Lamnidae
ಕುಟುಂಬ: ಲ್ಯಾಮ್ನಿಡೇ
•Genus: Carcharodon
ಜೀನಸ್: ಕಾರ್ಕರೋಡಾನ್
•Species: carcharias
ಪ್ರಬೇಧ: ಕಾರ್ಕಾರಿಯಸ್
•Scientific Name: Carcharodon carcharia
ವೈಜ್ಞಾನಿಕ ಹೆಸರು: ಕಾರ್ಕಾರಡಾನ್ ಕಾರ್ಕಾರಿಯ
(ಚಿತ್ರ ಕೃಪೆ: http://www.3.bp.blogspot.com/)
ಸಾಮಾನ್ಯವಾಗಿ ೪೦-೫೦ ವರ್ಷ ಆಯಸ್ಸಿನ ಈ ಮೀನು ೪ ರಿಂದ ೫ ಮೀಟರ್ ಸರಾಸರಿ ಉದ್ದವಿರುತ್ತದೆ (೬.೫ ಮೀ ಸಹಾ ಕಂಡು ಬಂದಿದೆ). ಇವು ೨೦೦೦ ದಿಂದ ೪೦೦೦ ಕೆ.ಜಿ. ತೂಕವಿರುತ್ತವೆ. ಇದರ ಮರಿ ಸುಮಾರು ೧ ರಿಂದ ೧.೫ ಮೀಟರ್ ಉದ್ದವಿರುತ್ತದೆ. ಒಂದು ಹೆಣ್ಣು ಒಮ್ಮೆಗೆ ೬-೧೦ ಮರಿಗಳನ್ನು ಹಾಕುತ್ತದೆ. ಶಾರ್ಕ ಒವೋವೈವಿಪ್ಯಾರಸ್ ಅಂದ್ರೆ ಮರಿಹಾಕುವ (ತಾಯಿ-ಮಗುವಿನ ಮಧ್ಯೆ ಪೋಷಣಾ ಸಂಪರ್ಕವಿಲ್ಲದ) ವಿಧಾನದ ಸಂತಾನೋತ್ಪತ್ತಿ ಮಾಡುತ್ತದೆ. ಹೆಣ್ಣು ಸಮಾನ್ಯವಾಗಿ ಗಂಡಿಗಿಂತ ಹೆಚ್ಚು ಗಾತ್ರವಿರುತ್ತದೆ.
Saturday, June 5, 2010
World Environment Day (June 5th)
On March 28, 1979, the Three Mile Island nuclear reactor near Harrisburg partially melted down causing a near nuclear disaster. Fortunately about 18 billion curies of radiation that could have been released were held by the containment structure around the reactor.
8. Kuwaiti Oil fires, Gulf war
Friday, November 20, 2009
ಜೀವಿಗಳಲ್ಲಿ ರೋಗನಿರೋಧಕ ಗುಣ (Immunity in Life forms)
೧. ಸ್ವಪರಿಚಿತ (innate) ರೋಗನಿರೋಧಕತೆ (immunity)
ನಾನು ಪ್ರಾಣಿಗಳ ರೋಗನಿರೋಧಕ ಗುಣದ ಈ ಮೊದಲ ವಿಶೇಷತೆಯ ಬಗ್ಗೆ ಈ ಕಂತಿನಲ್ಲಿ ತಿಳಿಸಲಿಚ್ಛಿಸುತ್ತೇನೆ. ನನ್ನ ಈ ಲೇಖನಕ್ಕೆ ಒಂದು ಚಾಲಿತ ಚಿತ್ರಮಾಲಿಕೆ(animated clip) ನಿಮ್ಮಲ್ಲಿಗೆ ವಿಷಯವನ್ನು ತರಲು ಸಹಾಯಕವಾಗಬಹುದು.
ರೋಗನಿರೋಧಕ (ರೋನಿ) ಗುಣಗಳು ಎರಡು ಪ್ರಮುಖ ವಾಹಿನಿ (ಇವು ಒಂದಕ್ಕೊಂದು ಪೂರಕ ಮತ್ತು ಸಹಾಯಕ ಕೂಡ ಆಗಿರುತ್ತವೆ) ಗಳಿಂದ ಕೂಡಿವೆ ಎಂದು ಗುರುತಿಸಲ್ಪಟ್ಟಿವೆ. ಇವಕ್ಕೆ ಸ್ವಪರಿಚಿತ (ತಮಗೇ ತಿಳಿದ) ಮತ್ತು ಪರಿಚಯಾನಂತರದ (ಉದ್ಭವವಾಗುವ) ರೋಗ ನಿರೋಧಕ ಗುಣಗಳು ಎನ್ನಲಾಗಿದೆ ಇವನ್ನೇ Innate ಮತ್ತು Acquired Immunity ಎಂದು ಹೇಳಲಾಗುವುದು.
ಮೊದಲಿಗೆ ಜೀವಿಯ ಜೀವಕೋಶಕ್ಕೆ ಪರಿಚಯವಾಗುವ ಬಾಹ್ಯಾಂಶ (ಅಥವಾ ಬಾಹ್ಯವಸ್ತು ಅಥವಾ ಜೀವಿಯ ಅಂಶ ಎಂದರೂ ತಪ್ಪಿಲ್ಲ, antigen)ದ ಕೆಲವು ತತ್ವಗಳು (ಬಾಹ್ಯತತ್ವ ಅಥವಾ ಬಾಹ್ಯಾಂಶದ ಸಣ್ಣ ಸಣ್ಣ ಕಣಗಳು– epitopes) ಜೀವಿಯ ರೋಗನಿರೋಧಕ ಗುಣವನ್ನು ಎಚ್ಚರಿಸುವ ಕೆಲಸ ಮಾಡುತ್ತವೆ. ಆಗ ಜೀವಿಯ ಮೊದಲ ಶ್ರೇಣಿಯ ರೋಗನಿರೋಧಕಗಳನ್ನು ಎಚ್ಚರಿಸುವ ಕ್ರಿಯೆ ಪ್ರಾರಂಭವಾಗುತ್ತದೆ. ಈ ಮೊದಲ ಶ್ರೇಣಿಯ ರೋ.ನಿ. ಗಳು ಚರ್ಮ, ಬೆವರು, ಲಾಲಾ ಅಥವಾ ಜೊಲ್ಲು, ಲೋಳೆ (ಕಿವಿ ಮೂಗಿನಲ್ಲಿ ಕಾಣುವ ಅಂಟಾದ ದ್ರವ)..ಹೀಗೆ. ಈ ಶೇಣಿಯ ಜೀವಕೋಶಗಳೆಂದರೆ ಡೆಂಡ್ರೈಟ್ ಜೀವಕೋಶಗಳು. ಇವು ಚರ್ಮ, ರಕ್ತ, ಒಳಮಾಂಸ ಪದರಗಳು, ಹ್ರುದಯದ ಗೋಡೆಗಳು, ಕರುಳು ಮೇಲ್ ಮತ್ತು ಒಳ ಪದರಗಳು..ಹೀಗೆ ಎಲ್ಲೆಡೆ..ಕಂಡು ಬರುತ್ತವೆ. ಇವು ಇಂದೆಡೆ ಸ್ಥಿತ ಅಥವಾ ಸಂಚರಿಸುವ (fixed or circulating dendritic cells) ಜೀವಕೋಶಗಳಾಗಿರುತ್ತವೆ. ರೋಗಕಾರಕಗಳ ಅಂಶಗಳು ಚರ್ಮವನ್ನು ಭೇದಿಸಿ ಡೆಂಡ್ರೈಟುಗಳನ್ನು ಸಂಧಿಸಿದಾಗ, ರೋಗಕಾರಕ ಸಂಬಂಧಿತ ಅಂಶ ಅಥವಾ ಕಣ, ರೋಸ.ಕ. (pathogen associated patterns, PAPs) ಗಳನ್ನು ಈ ಜೀವಕೋಶಗಳು ಗುರುತಿಸುತ್ತವೆ. ಇಲ್ಲಿ ಹಲವಾರು ಅಂತರ್ಸಂಬಂಧಿತ ಮೂಲ ಕ್ರಿಯೆಗಳು ರೋಗಕಾರಕ ಸಂಬಂಧಿತ ಅಂಶಗಳನ್ನು ಮತ್ತು ಆ ಮೂಲಕ ರೋಗಕಾರಕಗಳನ್ನು ನಿಯಂತ್ರಿಸುವ ಕಾರ್ಯಕ್ಕೆ ಶುಭಾರಂಭವಾಗುತ್ತದೆ. ರೋ.ಸ.ಕ. ಗಳನ್ನು ಡೆಂಡ್ರೈಟ್ ಜೀವಕೋಶಕ್ಕೆ ಅಂಟಿಸುವ ಕೆಲಸವನ್ನು ಜೀವಿಯ ರಕ್ತ ಮತ್ತು ಜೀವರಸದಲ್ಲಿರುವ ಪ್ರೋಟೀನುಗಳು ಮಾಡುತ್ತವೆ, ಆಗ ರೋ.ಸ.ಕ.ಗಳನ್ನು ಹೊತ್ತು ಡೆಂಡ್ರೈಟ್ ಜೀವಕೋಶಗಳು ರೋಗನಿರೋಧಕ ಸೈನಿಕ ಕಣ, ರೋಸೈಕ (lymphocuyte) ಗಳ ಉತ್ಪತ್ತಿಯಾಗುವ ಅಂಗಾಂಶಗಳಿಗೆ, ಉದಾಹರಣೆಗೆ ಬಿ. ಜಾತಿಯ ರೋಸೈಕ (B-lymphocuyes) ಗಳನ್ನು ಉತ್ಪಾದಿಸುವ ಮೂಳೆಯ ಮಜ್ಜೆ (bone marrow) ಗೆ ಹೋಗಿ ರೋಸಕ ಗಳ ವರ್ಗಾವಣೆಯನ್ನು ಮಾಡುತ್ತವೆ. ಈ ಕ್ರಿಯೆಯಿಂದ ಈ ಸೈನಿಕ ಕಣಗಳಿಗೆ ರೋಗಸಂಬಂಧಿಕಣಗಳ ಪರಿಚಯವಾಗಿ..ಅದಕ್ಕೆ ಅನುಗುಣವಾದ ರೋಗನಿರೋಧಕ ಪ್ರೋಟಿನುಗಳ ಉತ್ಪಾದನೆಯನ್ನು ರೋಸೈಕಗಳು ಪ್ರಾರಂಭಿಸುತ್ತವೆ. ರೋಗನಿರೋಧಕ ಸೈನಿಕ ಕಣ (ರೋಸೈಕ) ಮೊದಲಿಗೆ ಏನೂ ಅರಿಯದ ಮುಗ್ಧ (unprimed) ಡೆಂಡ್ರೈಟುಗಳು ಮಾಡಿಸುವ ಪರಿಚಯದ ನಂತರ ಪ್ರಬುದ್ಧ (primed or stimulated) ರೋಸೈಕಗಳಾಗಿ ಮಾರ್ಪಡುತ್ತವೆ. ಈ ಪ್ರಬುದ್ಧ ರೋಸೈಕಗಳು ಇನ್ನೊಮ್ಮೆ ದಾಳಿ ಮಾಡುವ ಅದೇ ಜಾತಿಯ ರೋಗಕಾರಕಗಳನ್ನು ಮುತ್ತಿ ನಿಷ್ಕ್ರಿಯಗೊಳಿಸಲು ಸದಾನ್ನದ್ದರಾಗಿರುತ್ತವೆ.
ಇವುಗಳ ಬಗ್ಗೆ ಮತ್ತು ಇತರ ಕ್ಲಿಷ್ಟತೆಗಳನ್ನು ಮುಮ್ದಿನ ಕಂತಿನಲ್ಲಿ ವಿವರಿಸುತ್ತೇನೆ.
ನಿಮ್ಮ ಅನಿಸಿಕೆ, ಸಂದೇಹಗಳನ್ನು ಖಂಡಿತಾ ತಿಳಿಸಿ..azadis@hotmail.com">mailto:ತಿಳಿಸಿ..azadis@hotmail.com ಗೆ ಬರೆಯಿರಿ.
Friday, November 6, 2009
ರೈಬೋಸೋಮುಗಳು - ಜೀವಕೋಶ ಘಟಕಗಳು
ಎಲ್ಲ ಜೀವಿಗಳ ಬೆಳವಣಿಗೆ ಅಂದರೆ ಪ್ರೋಟೀನ್..ಜೀವ ಕೋಶ ಮತ್ತು ಶರೀರ ಕ್ರಿಯೆಗಳಿಗೆ ಬೇಕಾದುವುದು ಪ್ರೋಟೀನ್ ಗಳ ವಿವಿಧ ರೂಪಗಳಾದ ಹಾರ್ಮೋನುಗಳು (ಚೋದಕಗಳು), ಎಂಜೈಮು (ಕಿಣ್ವ) ಗಳು, ವಿಟಮಿನ್ನುಗಳು ಮತ್ತು ಇತರ ಕಡಿಮೆ ಸಾಂದ್ರತೆಯ ಸಹಸ್ರಾರು ಪ್ರೋಟೀನ್ ತಂತು (ಪೆಪ್ಟೈಡ್) ಗಳು. ಪ್ರೋಟೀನುಗಳು ನೇರವಾಗಿ ಮಾಂಸಖಂಡ, ರಕ್ತ ಮುಂತಾದ ದ್ರವಗಳಾಗಿ ರೂಪುಗೊಂಡರೆ... ಚೋದಕಗಳು ಹಲವಾರು ಶರೀರಕ್ರಿಯೆಗಳಿಗೆ ಅವಶ್ಯಕ (ಲೈಂಗಿಕ ಪರಿಪಕ್ವತೆ, ಬುದ್ಧಿ ಮತ್ತು ದೈಹಿಕ ಬೆಳವಣಿಗೆ..ಇತ್ಯಾದಿ). ಕಿಣ್ವಗಳು ಶರೀರದ ಹಲವಾರು ಕ್ರಿಯೆಗಳಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಭಾಗವಹಿಸುತ್ತವೆ ಹಾಗೂ ಆಹಾರ ಜೀರ್ಣ ಕ್ರಿಯೆಯಲ್ಲಿ ಬಹು ಮುಖ್ಯ ಪಾತ್ರವಹಿಸುತ್ತವೆ. ಉದಾಹರಣೆಗೆ, ಪ್ರೋಟೀನ್ ಭರಿತ ಆಹಾರದ ಜಿರ್ಣಕ್ರಿಯೆಗೆ ಪೆಪ್ಸಿನ್ ಮತ್ತು ಟ್ರಿಪ್ಸಿನ್ ಕಿಣ್ವಗಳು ಬೇಕಾದರೆ ಶರ್ಕರಗಳ (ದಾನ್ಯಭರಿತ ಆಹಾರ) ಪಾಚನ ಕ್ರಿಯೆಗೆ ಇನ್ಸುಲಿನ್ ಕಿಣ್ವ ಅವಶ್ಯಕ. ದೇಹ ರಕ್ಷಣೆಗೆ ರೋಗಕಾರಕಗಳನ್ನು ಗುರುತಿಸಲು ಹಲವಾರು ಕಡಿಮೆ ಸಾಂದ್ರತೆಯ ಪ್ರೋಟೀನ್ ತಂತುಗಳು (ಪೆಪ್ಟೈಡ್) ಬೇಕಾಗುತ್ತವೆ ಇವುಗಳನ್ನು ಸೈಟೋಕೈನ್ ಮತ್ತು ಕೀಮೋಕೈನ್ ಗಳು ಎಂದು ಕರೆಯುತ್ತಾರೆ. ಕಶೇರುಕಗಳ (ವರ್ಟಿಬ್ರೇಟ್) ರೋಗನಿರೋಧಕಗುಣದ ಮಹತ್ವಪೂರ್ಣ ಪ್ರೋಟೀನ್ ಘಟಕಗಳೆಂದರೆ..ಆಂಟಿಬಾಡಿಗಳು
ಇಲ್ಲಿ ರೈಬೋಸೋಮುಗಳ ಕಾರ್ಯವೈಖರಿಯ ಸಂಕ್ಷಿಪ್ತ ಪರಿಚಯ ಮಾಡಿಕೊಡುತ್ತಿದ್ದೇನೆ.
ರೈಬೋಸೋಮುಗಳು (ಚಿತ್ರದಲ್ಲಿ ಬಿಂದುಗಳಂತೆ ಕಾಣುವ) ಪ್ರತಿಜೀವಕೋಶದಲ್ಲೂ ಇರುತ್ತವೆ. ಎರಡು ರೂಪದಲ್ಲಿರುತ್ತವೆ- ಎಂಡೋಪ್ಲಾಸ್ಮಿಕ್ ರೆಟಿಕುಲಮ್ (ಇ.ಪಿ.ಆರ್)ಎಂಬ ನೆರಿಗೆ-ಪದರದಂತಿರುವ ಕೋಶದ್ರವ cytoplasm) ದಲ್ಲಿರುವ ಘಟಕಗಳಿಗೆ ಅಂಟಿಕೊಂಡಿರುವ ರೈಬೋಸೋಮುಗಳನ್ನು ಅಂಟಿಕೊಂಡ ರೈಬೋಸೋಮುಗಳೆನ್ನುತ್ತೇವೆ..ಹಾಗೆಯೇ ಕೋಶದ್ರವದಲ್ಲಿ ಸ್ವತಂತ್ರವಾಗಿ ತೇಲಾಡುವ ರೈಬೋಸೋಮುಗಳು.. ಇ.ಪಿ.ಆರ್. ಗೆ ಅಂಟಿರುವ ರೈಬೋಸೋಮುಗಳ ಸಂಶ್ಲೇಷಿತ ಪ್ರೋಟೀನುಗಳ ಉಪಯೋಗ ಕೋಶದ ಒಳಗೂ ಹೊರಗೂ ಆಗುತ್ತೆ...ಅದೇ ಸ್ವತಂತ್ರ ರೈಬೋಸೋಮುಗಳಿಂದ ಸಂಶ್ಲೇಷಿತ ಪ್ರೋಟೀನುಗಳ ಪ್ರಯೋಗ ಕೋಶದ ಆಂತರಿಕೆ ಬೇಡಿಕೆಗೆ ಆಗುತ್ತದೆ. ಕೆಲವು ರೈಬೋಸೋಮುಗಳು ಕೋಶ ಕೇಂದ್ರಪದರದ (nucelar membrane) ಮೇಲೂ ಅಂಟಿಕೊಂಡಿರುತ್ತವೆ. ಇವುಗಳ ಸಂಶ್ಲೇಷಿತ ಪ್ರೋಟೀನುಗಳು ಕೇಂದ್ರದಲ್ಲಿನ ಕ್ರಿಯೆಗಳಿಗೆ ನೆರವಾಗುತ್ತವೆ.
ರೈಬೋಸೋಮುಗಳು ಎರಡು ಭಾಗ (ಚಿತ್ರ), ಹಿರಿ ಘಟಕ (large sub unit) ಮತ್ತು ಕಿರಿ ಘಟಕ (small sub unit) ಗಳಿಂದ ಕೂಡಿದ್ದು ಸಂಶ್ಲೇಷಣೆಯ ಸಮಯದಲ್ಲಿ ಒಂದರಮೇಲೊಂದು ಕೂಡಿಕೊಂಡು ಸಂಶ್ಲೇಷಣೆಯನ್ನು ಪ್ರಾರಂಭಿಸುತ್ತವೆ. ಈ ಎರಡು ಘಟಕಗಳ ಮಧ್ಯೆ ಸುದ್ದಿವಾಹಕ ಆರ್.ಎನ್.ಎ. (ಇದರಲ್ಲಿ ಯಾವ ರೀತಿಯ ಪ್ರೀಟಿನಿನ ತಯಾರಿಕೆಯಾಗಬೇಕು ಎಂಬ ಮಾಹಿತಿ ಅಡಕವಾಗಿರುತ್ತೆ) ಅದು ನ್ಯೂಕ್ಲಿಯೋಟೈಡ್ (ಸಂಕೇತ ರೂಪಗಳು) ಗಳನ್ನು ಹೊಂದಿರುತ್ತದೆ. ನ್ಯೂಕ್ಲಿಕ ಆಮ್ಲತಂತುಗಳು (ಡಿ.ಎನ್.ಎ. ಅಥವಾ ಆರ್.ಎನ್.ಎ, ಕ್ರಮವಾಗಿ ಡಿ ಆಕ್ಸಿ ರೈಬೋ ನ್ಯೂಕ್ಲಿಕ್ ಆಮ್ಲ ಮತ್ತು ಆಕ್ಸಿ ರೈಬೋ ನ್ಯೂಕ್ಲಿಕ್ ಆಮ್ಲ) ಇಂತಹ ನ್ಯೂಕ್ಲಿಯೋಟೈಡುಗಳನ್ನು ಸಂಕೇತದ ರೂಪದಲ್ಲಿ ಹೊಂದಿದ್ದು ಮೂರು ನ್ಯೂಕ್ಲಿಯೋಟೈಡುಗಳು ಒಂದು ರೀತಿಯ ಅಮಿನೋ ಆಮ್ಲಕ್ಕೆ ಸಂಕೇತ ನೀಡುತ್ತವೆ.
ಡಿ.ಎನ್.ಎ. ದಲ್ಲಿ ಥಯಮಿನ್, ಗ್ವಾನಿನ್, ಸೈಟೊಸಿನ್ ಮತ್ತು ಅಡಿನಿನ್ ಎಂಬ ನ್ಯೂಕ್ಲಿಯೋಟೈಡುಗಳಿದ್ದರೆ ಆರ್.ಎನ್.ಎ.ದಲ್ಲಿ ಥಯಮಿನ್ ಬದಲಿಗೆ ಯುರಾಸಿಲ್ ಇರುತ್ತದೆ. ಪ್ರೋಟೀನ್ ತಯಾರಿಕೆಯಲ್ಲಿ ಆರ್.ಎನ್.ಎ.ಗಳದ್ದೇ ಪಾರುಪತ್ಯ. ಇವುಗಳ
ಹೀಗೆ ಪ್ರೋಟೀನ್ ಮತ್ತು ಪ್ರೋಟೀನ್ ತಂತು ಸಂಶ್ಲೇಷಣೆ (ತಯಾರಿಕೆ) ಯಲ್ಲಿ ರೈಬೋಸೋಮುಗಳ ಪಾತ್ರ ಅನಿವಾರ್ಯ ಹಾಗಾಗಿ ರೈಬೋಸೋಮುಗಳ ಬಗ್ಗೆ ಅವುಗಳ ಕಾರ್ಯವೈಖರಿಯಬಗ್ಗೆ ಸಿಗುವ ಪ್ರತಿ ಮಾಹಿತಿಯೂ ಮಹತ್ವಪೂರ್ಣವಾಗಿರುತ್ತೆ. ಬ್ಯಾಕ್ಟಿರಿಯಾಗಳಲ್ಲಿಯೂ ರೈಬೋಸೋಮುಗಳ ಕಾರ್ಯ ಇದೇ..ಅಂದರೆ ಬ್ಯಾಕ್ಟೀರಿಯಾ ಪುನರುತ್ಪತ್ತಿಗೆ ಮೂಲವಾದ ಕೋಶದ ವಿವಿಧ ಪ್ರೋಟೀನುಗಳ ಸಂಶ್ಲೇಷಣೆ..ಬ್ಯಾಕ್ಟೀರಿಯಾ ಕೋಶಪದರದ ತಯಾರಿಕೆ ಇತ್ಯಾದಿ. ಬ್ಯಾಕ್ಟೀರಿಯಾ ನಮ್ಮಲ್ಲಿ ಉಂಟುಮಾಡುವ ರೋಗಗಳ ನಿಯಂತ್ರಣಕ್ಕೆ ಆಂಟಿಬಯೋಟಿಕ್ ಗಳ ಪ್ರಯೋಗ ಆಗುತ್ತಿದೆ...ಆದರೆ ಕೆಲವು ಬ್ಯಾಕ್ಟೀರಿಯಾಗಳು ಕೆಲವು ಆಂಟಿಬಯೋಟಿಕ್ ಗಳಿಗೆ ಕ್ಯಾರೇ..ಎನ್ನುವುದಿಲ್ಲ. ಆಂಟಿಬಯೋಟಿಕ್ ಗಳ ಮೂಲಕ್ರಿಯೆ ಬ್ಯಾಕ್ಟೀರಿಯಾಗಳ ರೈಬೋಸೋಮುಗಳ ಪ್ರೋಟೀನ್ ತಯಾರಿಕೆ ಕ್ರಿಯಯಲ್ಲಿ ಅಡ್ಡಿಯುಂಟುಮಾಡುವುದು ಇದರಿಂದ ಬ್ಯಾಕ್ಟೀರಿಯಾಗಳು ಪುನರುತ್ಪತ್ತಿ ಮಾಡಲಾಗದೇ ಸಾಯುತ್ತವೆ.
ಆದರೆ ಆಂಟಿಬಯೋಟಿಕ್ ಗಳಿಗೆ ವಿರೋಧ ಒಡ್ಡುವ ಬ್ಯಾಕ್ಟೀರಿಯಾಗಳಲ್ಲಿ ಆಂಟೀಬಯೋಟಿಕಗಳು ಬ್ಯಾಕ್ಟೀರಿಯಾ ರೈಬೋಸೋಮಿನ ಕಡೆ ಬರದಂತೆ ತಡೆಯುವ ವಸ್ತುಗಳನ್ನು (ಸ್ರಾವಕ) ಉತ್ಪಾದಿಸುವ ಸಾಮರ್ಥ್ಯ ಹುಟ್ಟಿಕೊಳ್ಳುತ್ತದೆ. ಈ ಸ್ರಾವಕಗಳು ಆಂಟೀಬಯೋಟಿಕ್ ಗಳನ್ನು ನಿಷ್ಪ್ರಯೋಜಕಗೊಳಿಸುತ್ತವೆ ಹಾಗಾಗಿ ಬ್ಯಾಕ್ಟಿರಿಯಾ ಪುನರುತ್ಪತ್ತಿ ರೋಗ ನಿಯಂತ್ರಣಕ್ಕೆ ಬರುವುದಿಲ್ಲ...ವೆಂಕಟರಾಮನ್ ರಾಮಕೃಷ್ಣನ್ ರ ಸಂಶೋಧನೆ ಈ ಬ್ಯಾಕ್ಟೀರಿಯಾಗಳ ರೈಬೋಸೋಮುಗಳು ಹೇಗೆ ಆಂಟಿಬಯೋಟಿಕ್ ಗಳನ್ನು ನಿಷ್ಕ್ರಿಯಗೊಳಿಸುತ್ತವೆ ಎಂಬುದನ್ನು ಕಂಡುಹಿಡಿಯಲು ಸಹಾಯಕವಾಗುವ ಸಂಶೋಧನೆ. ಇದರ ಉಪಯೋಗದಿಂದ ಆಂಟಿಬಯೋಟಿಕ್ ಗಳನ್ನು ಹೇಗೆ ಪ್ರಭಾವಶಾಲಿಗಳನ್ನಾಗಿಸಬಹುದು ಎಂದು ತಿಳಿಯಬಹುದು.
ಇದು ರೈಬೋಸೋಮುಗಳ ಕಾರ್ಯವಿಧದ ಸಂಕ್ಷಿಪ್ತ ಪರಿಚಯ..
(ನಿಮ್ಮ ಅನಿಸಿಕೆ..ಪ್ರಶ್ನೆ...ಸಂದೇಹಗಳಿಗೆ..ಸ್ವಾಗತ....ತಿಳಿದವರು ತಪ್ಪಿದ್ದರೆ ತಿದ್ದಿದರೆ ಇನ್ನೂ ಉತ್ತಮ)
Wednesday, October 7, 2009
Venkataraman Ramakrishnan WINS NOBEL for Chemistry
Stockholm: Americans Venkatraman Ramakrishnan and Thomas Steitz and Israeli Ada Yonath won the 2009 Nobel Prize in chemistry on Wednesday formapping ribosomes, the protein-producing factories within cells, at the atomic level.
Born in 1952 in Chidambaram, Ramakrishnan shares the Nobel prize with Thomas E Steitz (US) and Ada E Yonath (Israel) for their "studies of the structure and function of the ribosome".
Ramakrishnan earned his B.Sc. In Physics (1971) from Baroda University and his Ph.D. In Physics (1976) from Ohio University.
He moved into biology at the University of California, San Diego, where he took a year of classes, then conducted research with Dr Mauricio Montal, a membrane biochemist.
The Royal Swedish Academy of Sciences said their work has been fundamental to the scientific understanding of life and has helped researchers develop antibiotic cures for various diseases.
Yonath is the fourth woman to win the Nobel chemistry prize and the first since 1964, when Dorothy Crowfoot Hodgkin of Britain received the prize. This year's three laureates all generated three-dimensional models that show how different antibiotics bind to ribosomes.
"These models are now used by scientists in order to develop new antibiotics, directly assisting the saving of lives and decreasing humanity's suffering," the academy said in its announcement.
"All three have used a method called X-ray crystallography to map the position for each and every one of the hundreds of thousands of atoms that make up the ribosome," the academy said.
Alfred Nobel, a Swedish industrialist who invented dynamite, established the Nobel Prizes in his will in 1895. The first awards were handed out six years later.
Each prize comes with a 10 million kronor ($1.4 million) purse, a diploma, a gold medal and an invitation to the prize ceremony in Stockholm on Dec. 10. The Peace Prize is handed out in Oslo.
On Monday, three American scientists shared the Nobel Prize in medicine for discovering a key mechanism in the genetic operations of cells, an insight that has inspired new lines of research into cancer.
The physics prize on Tuesday was split between a Hong Kong-based scientist who helped develop fiber-optic cable and two Canadian and American researchers who invented the ``eye'' in digital cameras _ technology that has revolutionized communications and science.
The literature and peace prize winners will be announced later this week and the economics announcement is set for Monday.
Source: Associated Press
Wednesday, September 23, 2009
ಮೀನುಗಳು---ಅಬ್ಬಾ..ಎಂಥ ಮೀನುಗಳು...!!
ಮೀನುಗಳು, ಜಲಕನ್ಯೆಯರು, ಮತ್ಸ್ಯಾವತಾರ ಹೀಗೆ ನಮ್ಮೊಂದಿಗೆ ನಮ್ಮ ಪರಂಪರೆಯೊಂದಿಗೆ ಹಾಸು ಹೊಕ್ಕಾಗಿರುವ ಜೀವಿಗಳು. ಮಾನವನ ಜೀವವಿಕಾಸ ಸರಣಿಯ ಶ್ರಂಖಲೆಯಲ್ಲಿ ಬಹು ಮುಖ್ಯ ಕೊಂಡಿ..ಈ ಮೀನುಗಳು. ಬೆನ್ನುಮೂಳೆಯ ಪ್ರಥಮ ಅವತರಣ ಮೀನಿನಲ್ಲಾಯಿತು. ಅದೇ ಕಾರಣಕ್ಕೆ ಮಾನವ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಮೂಲವನ್ನು ಹುಡುಕಲು ಹೋದರೆ...ಮೀನು ಸಂಶೋಧನಾ ಯೋಗ್ಯ ಎಂದು ಶಾಸ್ತ್ರವೇತ್ತರು ಮೀನನ್ನು ಸಂಶೋಧನೆಗಳಿಗೆ ಬಳಸಲಾಗುತ್ತಿದೆ.
ಇನ್ನು ಮೀನುಗಳ ವಿಕಾಸದಲ್ಲೂ ಬಹು ಮಹತ್ತರ ತಿರುವುಬಂದದ್ದು...ಮೃದ್ವಸ್ಥಿ (ಕಾರ್ಟೀಲೇಜ್..ಮೆದು ಮೂಳೆ) ಮೀನುಗಳ ವಿಕಾಸ ನಂತರ ಸಹಜಸ್ಥಿ (ಟ್ರೂ ಬೋನ್) ಹೊಂದಿದ ಮೀನುಗಳು. ಮುದ್ವಸ್ಠಿ ಮೀನುಗಳು ಎಂದರೆ ಒಡನೆಯೇ ನೆನೆಪಾಗುವುದು ಶಾರ್ಕ್ ಮೀನು. ಬಹುಶಃ ಜಲಜೀವಿಗಳಲ್ಲಿ ವಿಖ್ಯಾತ ಮತ್ತು ಕುಖ್ಯಾತವಾಗಿರುವ ಜೀವಿ ಎಂದರೆ ಶಾರ್ಕ್ ಮೀನು. ಬಹುಪಾಲು ಮೃದ್ವಸ್ಥಿಗಳು ಸಮುದ್ರಗಳಲ್ಲೇ ಕಂಡುಬರುತ್ತವೆ (ಶಾರ್ಕ್ ಗಳ ಬಗ್ಗೆ ಇನ್ನೊಮ್ಮೆ ಬರೆಯುವೆ..). ಶಾರ್ಕ್ ಜಾತಿಗೆ ಸೇರಿದ ಸ್ಕೇಟ್ ಮತ್ತು ರೇ ಮೀನುಗಳೂ ಮೃದ್ವಸ್ಥಿಗಳೇ.
ಇನ್ನು ಸಹಜಸ್ಥಿ ಮೀನುಗಳು, ಕೆರೆ, ಕುಂಟೆ, ಹೊಂಡ, ಕುಂಟೆ, ಸರೋವರ, ನದಿ, ನಾಲೆ, ಜಲಾಶಯ ಅಲ್ಲದೇ ಹಿನ್ನೀರು, ಚೌಳುಪ್ಪುನೀರು, ಸಮುದ್ರ ತಟಗಳು, ಆಳ ಸಮುದ್ರ, ಅಷ್ಟೇ ಏಕೆ...ಹಿಮಾವೃತ ಅಂಟಾರ್ಟಿಕಾದಲ್ಲೂ ಕಂಡುಬರುತ್ತವೆ.
ಇವುಗಳಲ್ಲಿನ ಕೆಲವು ವೈವಿಧ್ಯಗಳ ಸ್ಥೂಲ ಪರಿಚಯವೇ ಈ ಲೇಖನ.
ಚುಕ್ಕೆ ಬಾಲದ ಸಮುದ್ರ ಸಿಂಹ: ಸಮುದ್ರ ಸಿಂಹಗಳು ಬಹು ಮನೋಹಕ ಮೀನುಗಳಲ್ಲಿ ಪ್ರಮುಖವಾದುವು. ಇವುಗಳ ರೆಕ್ಕೆಮುಳ್ಳು ವಿಷಯುಕ್ತವಾಗಿದ್ದು ಇವುಗಳ ದೇಹವಿನ್ಯಾಸ ಒಂದುರೀತಿಯ ಅಪಾಯ ಸೂಚಕಹಾರುವ ಗುರ್ನಾರ್ಡ ಮೀನು: ಸಮುದ್ರ ತಲದಲ್ಲಿ ಹಾರಾಡುವಂತೆ ಈಜಾಡುವ ಮೀನುಗಳಿವು. ಕೆರೆಬ್ಬಿಯನ್ ದ್ವೀಪಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಸಮುದ್ರ ಮೇಲ್ಪದರಗಳಲ್ಲಿ ಕಾಣಸಿಗುವ ಹಾರಾಡು
ವ ಮೀನುಗಳಿಗಿಂತ ವಿಭಿನ್ನ.ಹಾವಿನಂತಿರುವ ಮೊರೆ ಈಲ್ ಮೀನು: ಸಮುದ್ರ ತಲದ ಕೋರಲ್ಕಾಡಿನ ಬಹು ನಿಷ್ಣಾತ ಬೇಟೆಗಾರ. ಇದರ ಮಚ್ಚೆಗಳು ಕೋರಲ್ಗಳ ಅವಿತಾಗ ತನ್ನನ್ನು ಗುರುತಿಸದಂತೆ ಮಾಡಿಕೊಂಡು ಮೀನನ್ನು ಬೇಟೆಯಾಡುತ್ತದೆ.


ಪಾರ್ಕುಪೈನ್ ಮೀನು: ನೋಡಲು ವಿಚಿತ್ರವಾಗಿದ್ದು ಸ್ವರಕ್ಷಣಾ ಸಾಮರ್ಥ್ಯದ ಅಮೋಘ ನಮೂನೆಯನ್ನು ಹೊಂದಿದೆ. ಇದು ವೈರಿಯನ್ನು ಕಂಡರೆ ನೀರನ್ನು ಕುಡಿದು ಒಮ್ಮೆಗೇ ಊದಿಕೊಂಡು ಗಾಬರಿ ಹುಟ್ಟಿಸುತ್ತೆ ಅಲ್ಲದೇ ಅದರ ಚೂಪಾದ ಮುಳ್ಳುಗಳು ತಿನ್ನಲು ಬರುವ ಮೀನಿಗೆ ಕಂಟಕಪ್ರಾಯವಾಗಿರುತ್ತೆ.











ಡಲ್ಗುದುರೆಗಳ ಜಾತಿಯ ಮೀನುಗಳಿವು, ತನ್ನ ಪರಿಸರದೊಡನೆ (ಸಮುದ್ರ ಸಸ್ಯಗಳ ನಡುವೆ) ಸಮ್ಮಿಳಿತಗೊಳ್ಳುವ ಸ್ವರಕ್ಷಣಾ ತಂತ್ರ ಇವುಗಳದ್ದು.