Wednesday, December 26, 2012

ಶಾರ್ಕ್ ಮೀನಿಗೆ ಕ್ಯಾನ್ಸರ್ ಬರೊಲ್ವಂತೆ!! - ಸತ್ಯವೆಷ್ಟು ??



ಶಾರ್ಕ್ ಮೀನಿಗೆ ಕ್ಯಾನ್ಸರ್ ಬರೊಲ್ವಂತೆ!!  - ಸತ್ಯವೆಷ್ಟು ??

ಡಾಕ್ಟ್ರೇ..ಮೀನಿಗೆ ಕ್ಯಾನ್ಸರ್ ಬರೊಲ್ವಂತೆ ನಿಜವೇ...?, ನನಗೆ ಕೆಲವು ಕಡೆ ಎದುರಾಗಿರೋ ಪ್ರಶ್ನೆ ಇದು. ಹೌದೇ..? ನನಗೂ ಜಿಜ್ಞಾಸೆಗೆ ಎಡೆಮಾಡಿದ ವಿಷಯವಾಯಿತು-ಮೀನಿನ ಕ್ಯಾನ್ಸರ್ ನಿರೋಧಕತೆಯ ಪ್ರಶ್ನೆ. ಮೀನಿನ ಆರೋಗ್ಯನಿರ್ವಹಣೆ ನನ್ನ ಸಂಶೋಧನಾ ವಿಷಯವಾದರೂ ಈ ಬಗ್ಗೆ ಹೆಚ್ಚು ಓದಿದ ನೆನಪಿಲ್ಲ. ವಿಷಯ ಜಿಜ್ಞಾಸೆಯ ಹುಳ ತಲೆಗೆ ಹೊಕ್ಕರೆ ಅದರ ಬಗ್ಗೆ ತಿಳಿದುಕೊಳ್ಳುವ ಹುಚ್ಚು ಹಂಬಲ ಎಲ್ಲಾ ಸಂಶೋಧಕರಲ್ಲೂ ಇರುತ್ತೆ ಎನ್ನುವುದಕ್ಕೆ ನಾನು ಹೊರತಾಗಿಲ್ಲವಾದ್ದರಿಂದ ಶೋಧಕಾರ್ಯ ಪ್ರಾರಂಭವಾಯ್ತು.
ಮೀನು ಕಶೇರುಕಗಳ ವಿಕಸನಾ ಹಾದಿಯ ಮೂಲ ಜೀವಿ ಅಲ್ಲಿಂದಲೇ ಮಾನವ ವಿಕಾಸಗೊಂಡಿರುವುದು. ಹಾಗಾಗಿ ಕ್ಯಾನ್ಸರ್ ಬರದೇ ಇರಬಹುದಾದ ಗುಣವಿಶೇಷ ಮೀನುಗಳಲ್ಲಿದೆ ಎನ್ನುವುದೇ ಇಲ್ಲಿಯವರೆಗಿನ ನಡೆದಿರುವ ಸಂಶೋಧನೆಗಳಿಂದ ಸಿಧ್ದವಾಗಿರುವ ವಿಷಯ. ಮೀನು, ಉಭಯ ಜೀವಿ ಮತ್ತು ಉರಗಗಳ ಸುಮಾರು ೪೦೦೦ ಮಾದರಿ (ಸ್ಯಾಂಪಲ್) ಗಳು ಕ್ಯಾನ್ಸರ್ ಹೊಂದಿವೆ ಎನ್ನುವುದನ್ನು ಮಾದರಿಗಳ ಅಧ್ಯಯನದ ಮೂಲಕ ತಿಳಿದುಕೊಳ್ಳಲಾಗಿದೆ. ಹಾಗಾದರೆ ಮೀನುಗಳಲ್ಲಿ ಕ್ಯಾನ್ಸರ್ ವಿರೋಧಿಸುವ ಅಥವಾ ಕ್ಯಾನ್ಸರ್ ಗೆ ಕಡಿಮೆ ಗುರಿಯಾಗುವ ಬಗ್ಗೆ ಸುದ್ದಿಯಾಗಿದ್ದು ಏಕೆ?? ಇದರಲ್ಲಿ ಏನೂ ಹುರುಳಿಲ್ಲವೇ..???
ಜನಸಾಮಾನ್ಯನಿಗೆ ನೀರಿನಲ್ಲಿರುವ ರೆಕ್ಕೆಯುಳ್ಳ ಈಜುವ ಜೀವಿಗಳೆಲ್ಲಾ ಮೀನೇ. ಆದರೆ ಮೀನಿನಲ್ಲಿ ಮೂರು ಮುಖ್ಯ ವಿಧಗಳಿವೆ ಎನ್ನುವುದು ಕೆಲವರಿಗೆ ಮಾತ್ರ ತಿಳಿದಿದೆ. ಜೀವ ವಿಕಸನದ ಮೊದಲ ಕೊಂಡಿ- ಮೃದ್ವಸ್ಥಿ ಮೀನುಗಳು. ಇವುಗಳಲ್ಲಿ ಗಡಸು ಮೂಳೆ ಇರುವುದಿಲ್ಲ. ಮೃದು ಮೂಳೆಯನ್ನು ಹೊಂದಿರುವ ಶಾರ್ಕ್, ರೇ ಮತ್ತು ಸ್ಕೇಟ್ ಮೀನುಗಳು ಈ ಮೊದಲ ಕೊಂಡಿಯ ಸದಸ್ಯಜೀವಿಗಳು. ನಂತರದ ಕೊಂಡಿಯಲ್ಲಿ ಬರುವ ಮೀನಿನ ವಿಧ-ಗಡಸು ಬೆನ್ನು ಮೂಳೆಯಿರುವ ಮೃದುರೆಕ್ಕೆಯುಳ್ಳ ಮೀನುಗಳು. ಇವುಗಳಲ್ಲಿ ಬಹುಪಾಲು ಒಂಟಿ ಬೆನ್ನು ರೆಕ್ಕೆಯಿರುತ್ತದೆ ಮತ್ತು ರೆಕ್ಕೆ ರೇಖೆಯನ್ನು ಹೊಂದಿರುತ್ತವೆ, ಕೆಲವೊಮ್ಮೆ ಮೃದು ಅಥವಾ ಗಡಸು ಮುಳ್ಳು ಇರಲೂಬಹುದು. ನಮ್ಮ ಕೆರೆಗಳಲ್ಲಿ, ನದಿಗಳಲ್ಲಿ ಸಿಗುವ ಗೆಂಡೆ ಮೀನು, ಇದೇ ಕೊಂಡಿಯ ಸದಸ್ಯ ಜೀವಿಗಳು. ಇನ್ನು ಮೂರನೇ ವಿಧ ಅಥವಾ ಕೊಂಡಿಯ ಮೀನುಗಳಲ್ಲಿ ಮೂಳೆಯ ಅಂಶ ಹೆಚ್ಚಾಗಿದ್ದು ರೆಕ್ಕೆಗಳಲ್ಲಿ ಗಡಸು ಮುಳ್ಳುಗಳಿರುತ್ತವೆ.
ಹಾಗಾದರೆ ಈ ಕ್ಯಾನ್ಸರ್ ಭೂತಕ್ಕೆ ಉತ್ತರ ಸಿಕ್ಕಿದ್ದು..?? ಹೌದು, ಹೆಚ್ಚು ವಿಕಸನಗೊಂಡ ಗಡಸು ಮೂಳೆಯ ಮೀನಿನ ಸಮೂಹದಲ್ಲಲ್ಲ. ಮೃದ್ವಸ್ಥಿಗಳಾದ ಶಾರ್ಕ್, ರೇ ಮತ್ತು ಸ್ಕೇಟ್ ಗಳಲ್ಲಿ. ಒಂದಂತೂ ಅಧ್ಯಯನಗಳಲ್ಲಿ ಸಿದ್ಧವಾಗಿತ್ತು. ಮಾನವ ಅಥವಾ ಇನ್ನಿತರ ಸಸ್ತನಿಗಳಲ್ಲಿ ಕಂಡುಬರುವ ಪ್ರಮಾಣದ ಕ್ಯಾನ್ಸರ್ ಪೀಡನೆ ಶಾರ್ಕ್ ಜಾತಿಯ ಮೀನಿನಲ್ಲಿ ಇಲ್ಲದಿರುವುದು..!! ಬಹುಶಃ ಈ ಅಪೂರ್ಣ ಮಾಹಿತಿಯ ಕಾರಣ ಮತ್ತು ಇದನ್ನೇ ಲಾಭಕ್ಕೆ ಉಪಯೋಗಿಸಿಕೊಂಡ ಉದ್ಯಮ ಟನ್ನುಗಟ್ಟಲೆ ಶಾರ್ಕ್ ಗಳ ಮಾರಣಹೋಮಕ್ಕೆ ಕಾರಣವಾಯಿತೆನ್ನುವುದು ಈಗ ಇತಿಹಾಸ.
ಕ್ಯಾನ್ಸರ್ – ದೇಹದ ಯಾವುದೇ ಅಂಗದ ಕೋಶಿಕೆಗಳ ಹುಚ್ಚಾಪಟ್ಟೆ ಬೆಳವಣಿಗೆ. ಜೀವಕೋಶಗಳು ಸಾಮಾನ್ಯಕ್ಕಿಂತ ವೇಗವಾಗಿ ದ್ವಿಗುಣಗೊಂಡು ಹುಣ್ಣಾಗುವಂತೆ ಮಾಡಿ ಆ ಅಂಗದ ಮೂಲಕ್ರಿಯೆಗೆ ಕುತ್ತು ತರುತ್ತವೆ. ಜೀವಕೋಶದ ಬೆಳವಣಿಗೆಗೆ ಪೌಷ್ಠಿಕಾಂಶ ಪೂರೈಕೆ ಅಗತ್ಯ. ಈ ಪೂರೈಕೆಯನ್ನು ರಕ್ತನಾಳಗಳು ಪೌಷ್ಠಿಕಾಂಶಗಳನ್ನು ಹೊತ್ತ ರಕ್ತವನ್ನು ತರುವ ಮೂಲಕ ಮಾಡುತ್ತವೆ. ಅಂದರೆ ಕ್ಯಾನ್ಸರ್ ಬೆಳವಣಿಗೆಗೆ ರಕ್ತನಾಳಗಳ ಹಬ್ಬುವಿಕೆ ಅವಶ್ಯಕ. ಕ್ಯಾನ್ಸರ್ ಪೀಡಿತ ಜೀವಕೋಶಗಳು “ಆಂಜಿಯೋಜೆನಿನ್” ಎಂಬ ಚೋದಕ (ಹಾರ್ಮೋನ್) ವನ್ನು ಸ್ರವಿಸಿ ರಕ್ತನಾಳ ಹಬ್ಬುವಿಕೆಗೆ ಸಹಾಯಮಾಡಿ ಕ್ಯಾನ್ಸರ್ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಈ ನಿರ್ದಿಷ್ಟ ಕ್ರಿಯೆಯಲ್ಲಿ ಶಾರ್ಕ್ ಗಳು ತೋರುವ ವಿವಿಧತೆ ಅವ್ಗುಗಳಲ್ಲಿ ವಿರಳವೆನಿಸುವ ಕ್ಯಾನ್ಸರ್ ಸಾದ್ಯತೆಗೆ ಕಾರಣ ಎನ್ನಲಾಗಿದೆ. ಶಾರ್ಕ್ ಮೀನುಗಳ ಮೃದ್ವಸ್ಥಿಯಲ್ಲಿ “ಆಂಜಿಯೋಜೆನಿನ್ ನಿರೋಧಕ” ಇದೆಯೆಂದು ಸಂಶೋಧನೆ ಮೂಲಕ ಕಂಡುಕೊಳ್ಳಲಾಯಿತು. ಇದೇ ಕಾರಣಕ್ಕೆ ಶಾರ್ಕ್ ಮುಂತಾದ ಮೃದ್ವಸ್ಥಿಗಳ್ಲಿ ಕ್ಯಾನ್ಸರ್ ಸಾಧ್ಯತೆಗಳು ವಿರಳ ಎನ್ನುವ ತೀರ್ಮಾನಕ್ಕೆ ಬರಲಾಯಿಯಿತು. ಈ ಸಂಶೋಧನೆಯ ಪ್ರಕಟಣೆಯಿಂದಾದ ಅವಘಡ ಬಹು ಘೋರವಾಗಿತ್ತು. ಡಾ. ಐ. ವಿಲಿಯಮ್ ಎಂಬುವರು ಶಾರ್ಕ್ ಮೀನಿನ ಮೃದ್ವಸ್ಥಿ ಕ್ಯಾನ್ಸರ್ ತಡೆಗೆ ಉತ್ತಮ ಎನ್ನುವ ರೀತಿ ಪ್ರತಿಪಾದಿಸಿ 1992ರಲ್ಲಿ “ಶಾರ್ಕ್ ಮೀನಿಗೆ ಕ್ಯಾನ್ಸರ್ ತಗಲುವುದಿಲ್ಲ” (Sharks don’t get Cancer) ಎಂಬ ಪುಸ್ತಕವನ್ನು ಬರೆದರು, ಅದು ಬಹು ಜನಪ್ರಿಯವೂ ಆಯಿತು. ತತ್ಪರಿಣಾಮವಾಗಿ “ಲೇನ್” ಎಂಬುವವ ಶಾರ್ಕ್ ಮೀನುಗಾರಿಕೆ ಮತ್ತು ಮೃದ್ವಸ್ಥಿ ಗುಳಿಗೆ ತಯಾರಿಕಾ ಘಟಕವನ್ನು ಪ್ರಾರಂಭಿಸಿದ, ಈ ಹುಚ್ಚು ಹಬ್ಬಿ ಉತ್ತರ ಅಮೇರಿಕಾದ ಹಲವು ಕಂಪನಿಗಳು ಹುಟ್ಟಿಕೊಂಡವು. ಒಂದು ಅಂದಾಜಿನ ಪ್ರಕಾರ ಅಮೇರಿಕಾದ ಕೋಸ್ಟರಿಕಾದಲ್ಲಿದ್ದ ಒಂದು ಮೃದ್ವಸ್ಥಿ ಗುಳಿಗೆ ತಯಾರಿಕಾ ಘಟಕ ವರ್ಷವೊಂದಕ್ಕೆ 25 ಲಕ್ಷಕ್ಕೂ ಮೀರಿ ಶಾರ್ಕುಗಳ ಮಾರಣಹೋಮ ಮಾಡಿತಂತೆ. ಆದರೆ ಈ ಗುಳಿಗೆಗಳಿಂದ ಆ ಭೌಗೋಳಿಕ ಕ್ಷೇತ್ರದಲ್ಲಿ ಮಾನವನ ಕ್ಯಾನ್ಸರ್ ತಡೆಗಟ್ಟಲಾಗಿದೆ ಎನ್ನುವುದಕ್ಕೆ ಯಾವುದೇ ದಾಖಲೆಯಾಗಲೀ ವೈಜ್ಞಾನಿಕ ಪುರಾವೆಯಾಗಲಿ ಸಿಕ್ಕಿಲ್ಲ. ಇಲ್ಲಿ ಗಮನಿಸಬೇಕಾದ ಅಂಶ – ಶಾರ್ಕಿನಲ್ಲಿ ನಡೆಯುವ ಕ್ರಿಯೆ ಮಾನವನಲ್ಲಿ ನಡೆಯುತ್ತದೆಯೇ ಎನ್ನುವುದು, ಹಾಗೂ ಗುಳಿಗೆಗಳ ಸೇವನೆ ಆಹಾರ ರೂಪದಲ್ಲಾಗಬೇಕು. ಆಗ ಮೃದ್ವಸ್ಥಿಯಲ್ಲಿದೆ ಎನ್ನಬಹುದಾದ ಆಂಜಿಯೋಜೆನಿನ್ ನಿರೋಧಕ ಔಷಧೀಯ ಅಂಶ ಕ್ಯಾನ್ಸರ್ ಪೀಡಿತ ಕೋಶಗಳ ತನಕ ತಲುಪುವವರೆಗೆ ತನ್ನತನ ಕಾಪಾಡಿಕೊಂಡಿರುತ್ತದೆಯೇ ಎನ್ನುವ ಅಂಶವನ್ನು ಸಾಧಿಸಿ ತೋರಿಸಲಾಗಿಲ್ಲ. ಕೇವಲ ಸ್ಠೂಲ ಅರಿಮೆಗಳಿಂದ ವಿವೇಚನಾ ರಹಿತ ಜೀವಹಾನಿ ಮತ್ತು ಪರಿಸರ ಹಾನಿ ಎಷ್ಟು ಸರಿ??!! ಯೋಚಿಸಬೇಕಾಗುತ್ತದೆ.

Saturday, October 13, 2012

Aquaculture - ಜಲಕೃಷಿ

ಮಾನವ ಜೀವ ವಿಕಾಸಹಾದಿಯಲ್ಲಿ ಕಲೆಗಳನ್ನು ಮೈಗೂಡಿಸಿಕೊಳ್ಳುತ್ತಿರುವಂತೆಯೇ ಆಹಾರವನ್ನು ಪ್ರಕೃತಿಯಿಂದ ಪಡೆಯುವ ಕಲೆಯನ್ನೂ ಕರಗತಮಾಡಿಕೊಳ್ಳತೊಡಗಿದ. ಆಗ ಮೊದಲಿಗೆ ಬೇಸಾಯ ಪದ್ದತಿಯ ಅಳವಡಿಕೆಯಾಯಿತು. ಸರಿಸುಮಾರು ಇದೇ ಸಮಯಕ್ಕೆ, ಮೀನಿನ್ನು ಜೀವಂತ ಹಿಡಿದು ಕುಡಿಕೆಯಲ್ಲಿಟ್ಟು ನೋಡುವ ಮೋಜಿನ ಸಮಯ ಆದಿ ಮಾನವ ಕಳೆದಿರಬಹುದೆನ್ನುವ ಊಹೆ ಸ್ವಾಭಾವಿಕವೇ ಸರಿ.
ಸಾಗರ, ನದಿ ನೀರಿಂದ ಮೀನನ್ನೂ ಬೇಟೆಯಾಡಿ ಹಿಡಿಯುತ್ತಿದ್ದುದು ಬಹುಶಃ ಪ್ರಾಣಿಬೇಟೆಯಷ್ಟೇ ಹಳೆಯ ಕಲೆಯಾಗಿರಬಹುದು. ಹೀಗೆ ಸಾಗರ-ನದಿ ಮತ್ತಿತರ ಜಲ ಮೂಲಗಳಿಂದ ಮೀನನ್ನು ಹಿಡಿದು ಆಹಾರಕ್ಕಾಗಿ ಉಪಯೋಗಿಸುವುದು ನಡೆದುಬಂದ ಕ್ರಿಯೆ. ಇದು ಪ್ರಾಣಿಜನ್ಯಾಹಾರೋತ್ಪಾದನೆ, ಅದರಲ್ಲೂ ಅತಿ ಪೌಷ್ಟಿಕಾಂಶ ಪೂರಿತ ಮೀನು, ಹೆಚ್ಚು ಹೆಚ್ಚು ಅಭಿವೃದ್ಧಿವಂತೆ ಮಾಡಿತ್ತು.
ಮೀನನ್ನು ಆಹಾರಬೆಳೆಗಳಂತೆ ಏಕೆ ಬೆಳಸಿ ಬಳಸಬಾರದು ಎನ್ನುವ ಜಿಜ್ಞಾಸೆಯಿಂದ ಮಾನವ ಮೀನು ಸಾಕಣೆಯತ್ತ ತನ್ನ ಒಲವನ್ನು ಹರಿಸುವಂತೆ ಮಾಡಿರಬಹುದು.

ಮೀನು ಸಾಕಣೆ, ಈ ಕಾರಣದಿಂದ, ಮಾನವನ ಒಂದು ಉದ್ದಿಮೆಯಾಗಿ ಬೆಳೆಯಿತು. ಈ ಬೇಸಾಯ ಪದ್ಧತಿಯ ಇತಿಹಾಸದ ಸ್ಥೂಲ ವಿವರಣೆ ಇಲ್ಲಿದೆ.

The catches from the world oceans and the freshwater resources are dwindling... probably this was the fore sight of our ancestors who initiated water culture similar to land culture (aquaculture vis a vis agriculture)
Here is a brief history of Global Aquaculture 




Period 2852 B.C. to 2737 B.C. The first of China's five Emperors, developed some knowledge of pond culture of Grey Mullet and Carp
From 2357 B.C. to 2205 B.C., the Emperors of China, Yao and Shun, appointed the World's first recorded Fishery Inspectors and Instructors.
2052-1786 B.C. Egyptian hieroglyphics suggest the Egyptians of the Middle Kingdom worked to culture fish in an intensive way. They certainly domesticated sea fishes to supply the luxurious tables of their richer houses; they also appointed special "Fish Keepers" to do the Fish Husbandry
In 475 B.C., Fan Li (Also known as Fau Lai) wrote a classic book on the "cult of the Carp". Do you know if this has been reprinted?Contact us.
Circa 100 B.C., the Roman 'Sergius Orata' developed Oyster Beds at Baiae on the Lucrine Sea
Circa 65 B.C., the Roman General 'Lucullus' built the Fish Ponds of Tusculum, near the Bay of Naples. There's a fun Circular Fish (Breeding?) pond at Lago di Paola ( See picture to Right) but so far I have no idea who built it.  It took many centuries for the circular pond to catch on, now many fish farmers use them regularly.
First Century A.D., the Roman 'Lucius Junius Moderatus Columella' produced a 'Treatise on Roman Pisciculture'
9th Century remains of river weirs have been discovered in the UK
960 A.D. to 1276 A.D., the Goldfish originated after work on selective  cross-breeding during this Sung Dynasty

For More Details and for your interests in WORLD of WATER
please click...
http://www.thehobb.tv/wow/water_culture_origins.html



Wednesday, October 5, 2011

ನಡೆದಾಡುವ ಶಾರ್ಕ್ ಮೀನು....


ಎಪಾಲುಟ್ ಶಾರ್ಕಿನ ಬಾಯಿಯ ಮಾರ್ಪಾಡು



ಎಪಾಲುಟ್ ಶಾರ್ಕ್


The epaulette shark (Hemiscyllium ocellatum) is a species of longtailed carpet shark, family Hemiscylliidae, found in shallow, tropical waters off Australia and New Guinea (and possibly elsewhere). The common name of this shark comes from the very large, white-margined black spot behind each pectoral fin, which are reminiscent of military epaulettes. A small species usually under 1 m (3.3 ft) long, the epaulette shark has a slender body with a short head and broad, paddle-shaped paired fins. The caudal peduncle (to which the tail fin is attached) comprises over half the shark's length. Adults are light brown above, with scattered darker spots and indistinct saddles.

Epaulette sharks have nocturnal habits and frequent shallow water on coral reefs or in tidal pools. This shark has evolved to cope with the severe nighttime oxygen depletion (hypoxia) in isolated tidal pools by increasing the blood supply to its brain and selectively shutting down non-essential neural functions. It is capable of surviving complete anoxia for an hour without ill effects, and at a much higher temperature than most other hypoxia-tolerant animals. Rather than swim, epaulette sharks "walk" by wriggling their bodies and pushing with their paired fins. This species feeds on a wide range of small benthic invertebrates and bony fishes. Epaulette sharks are oviparous, with females depositing pairs of egg capsules around every 14 days from August to December. Due to their hardiness and small size, epaulette sharks are popular with both public and home aquaria. The International Union for Conservation of Nature (IUCN) has assessed this species as of Least Concern, as outside of the small aquarium trade it is of little interest to fisheries.


ನಡೆದಾಡುವ ಶಾರ್ಕ್ : ಎಪಾಲುಟ್ ಶಾರ್ಕ್

ಕೋರಲ್ ಕಾಡು ನಮ್ಮ ಭೂಮಿ ಮೇಲಿನ ಕಾಡಿನಂತೆಯೇ ವೈವಿಧ್ಯಮಯ ಜಗತ್ತು ಅದು ತನ್ನ ಸ್ವಭಾವದ್ದು. ಕೋರಲ್ ಕ್ಯಾಲ್ಸಿಯಂ ಕಾರ್ಬೊನೇಟ್ ಯಥೇಚ್ಛವಾಗಿ ಸ್ರವಿಸಲ್ಪಟ್ಟ ಜೀವಿಗಳ ವಾಸಗೂಡು. ಅಲ್ಲದೇ ಇಲ್ಲಿ ಸಮುದ್ರ ತಲದ ಸಸ್ಯಗಳೂ ಇರುತ್ತವೆ. ಇವುಗಳಲ್ಲಿ ಹಲವು ದ್ವಿತಿಸಂಶ್ಲೇಷಣಾ ಕ್ರಿಯೆ (ಹರಿತ್ತಿನ ಪ್ರಯೋಗದಿಂದ) ಮೂಲಕ ತಮ್ಮ ಆಹಾರವನ್ನು ಗಿಟ್ಟಿಸಿಕೊಂಡರೆ ಕೆಲ ಸಸಿಗಳು ಸಮುದ್ರದ ಅಗಾಧ ರಾಸಾಯನಿಕಗಳನ್ನು ಬಳಸಿಕೊಂಡು ಆಹಾರೋತ್ಪಾನೆ ಮಾಡಿಕೊಳ್ಳುತ್ತವೆ ಹಾಗಾಗಿ ಈ ಜಾತಿಯ ಸಸ್ಯಗಳಿಗೆ ಸೂರ್ಯನ ರಶ್ಮಿಯ ಅಗತ್ಯತೆ ಇರುವುದಿಲ್ಲ. ಕೋರಲ್ ಮತ್ತು ಸಸ್ಯಗಳಿದ್ದೆಡೆ ಇತರ ಜೀವಿಗಳೂ ವಾಸವಾಗೋದು ಸಹಜ. ಚಿಪ್ಪು ಮೀನು (ಶೆಲ್ ಫಿಶ್), ಅಕ್ಟೋಪಸ್, ಏಡಿ, ಸಿಗಡಿ, ಚಿಕ್ಕ, ಮಧ್ಯಮ ದೊಡ್ದ ಮತ್ತು ಅತಿ ದೊಡ್ದ ಗಾತ್ರದ ಮೀನು ಎಲ್ಲಾ ಕಾಣಸಿಗುತ್ತವೆ. ಇಲ್ಲಿ ಶಾರ್ಕ್ ಗಳಿಗೆ ಔತಣ ಯಾವಾಗಲೂ....ಇಂತಹ ಪರಿಸರದಲ್ಲೇ.. ಇರುವ ವೈವಿಧ್ಯಮಯ ಜೀವ ಸಂಕುಲ ವಿಜ್ಞಾನಿಗಳಿಗೆ ಸಧಾ ಸಂಶೋಧನೆಯ ಕೇಂದ್ರಬಿಂದುಗಳಾಗಿವೆ.

ನಡೆದಾಡುವ ಶಾರ್ಕ್...!!
ನಿಮಗೆ ಶಾರ್ಕ್ ಎಂದೊಡನೆ ವೇಗವಾಗಿ ಈಜುತ್ತಾ ಮೀನನ್ನು ಕಚ್ಚಿ ಓಡುವ ಶಾರ್ಕ ಚಿತ್ರ ಕಣ್ಣ ಮುಂದೆ ಬರುತ್ತದೆ... ನಡೆದಾಡುವ ಶಾರ್ಕ್ ..??!! ಇದು ನಿಜವೇ ಎನಿಸಬಹುದು.... ಹೌದು ನಿಜ..
ಈ ಶಾರ್ಕಲ್ಲಿ ಕಿವಿರಸೀಳಿನ ಕೆಳಭಾಗದ ರೆಕ್ಕೆಗಳು ನಡೆಪಾದದಂತೆ ಮಾರ್ಪಾಡುಗೊಂಡಿರುತ್ತವೆ. ಕೆಲ ಬೀಚ್ ಗೆ ಹೋಗುವ ಹವ್ಯಾಸವುಳ್ಲವರು "ಮಡ್ ಸ್ಕಿಪ್ಪರ್" ಎಂಬ ಮೀನನ್ನು ನೋಡಿರಬೇಕು. ಇದು ತನ್ನ ರೆಕ್ಕೆಗಳ ಸಹಾಯದಿಂದ ನಡೆದು ಬೀಚಿನ ಮೇಲೆ ಓಡಾಡುತ್ತದೆ...!!! ಇದೇ ತೆರನಾದ ಮಾರ್ಪಾಡು ಈ ನಡೆದಾಡುವ ಶಾರ್ಕಿನದು.
ಆಷ್ಟ್ರೇಲಿಯಾ ರಾಷ್ಟ್ರದ ಸಮುದ್ರದ ಸುತ್ತಮುತ್ತಲ ಸಮುದ್ರದ ಪರಿಸರಗಳಲ್ಲಿ ಕಂಡುಬರುವ ಈ ಮೀನು ಹೆಚ್ಚು ಆಳದ ನೀರಿಗೆ ಹೋಗುವುದಿಲ್ಲ. ಇದು ಗಾತ್ರದಲ್ಲಿ ಮಾಮೂಲಿ ಮೀನಿನಂತೆ ಕಂಡು ಬರುತ್ತದೆ ಮತ್ತು ವಯಸ್ಕ ಮೀನು ಸುಮಾರು ೩೦-೮೦ ಸೆಂ.ಮೀ. ಗೂ ಮೀರಿರುವುದಿಲ್ಲ. ಹಾಗಾಗಿ ಇದು ಇತರೆ ದೊಡ್ದ ಮೀನಿಗೆ ಅಥವಾ ಇತರೆ ಶಾರ್ಕ್ ಗಳಿಗೆ ಆಹಾರವಾಗುವ ಸಾಧ್ಯತೆ ಹೆಚ್ಚು. ಈ ಕಾರಣದಿಂದ ಎಪಾಲುಟ್ ಶಾರ್ಕ್ ಅದ್ಭುತ ದೇಹವರ್ಣಮಾರ್ಪಾಡಿನ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ತನ್ನ ಮೈಮೇಲಿನ ಮಚ್ಚೆಗಳು ಹಾಗೂ ವರ್ಣವಿನ್ಯಾಸ ಇದನ್ನ ತನ್ನ ಪರಿಸರದ ಹಿನ್ನೆಲೆಯಲ್ಲಿ ತನ್ನನ್ನು ಕಬಳಿಸಲು ಹೊಂಚುಹಾಕುವ ಮೀನುಗಳಿಂದ ರಕ್ಷಿಸುತ್ತದೆ. ಇವು ಮೊಟ್ಟೆ ಇಡುವ ಶಾರ್ಕಾಗಿದ್ದು ಒಮ್ಮೆಗೆ ಎರೆಡೆರಂತೆ ವರ್ಷಕ್ಕೆ ೩೦-೪೦ ಮೊಟ್ಟೆ ಇಡುತ್ತದೆ. ಮೊಟ್ಟೆಗಳು ಮೊದಲೇ ಗಂಡು ಶಾರ್ಕಿನಿಂದ ಫಲಗೊಂಡು ಹೊರಬರುತ್ತವೆ. ಹಾಗಾಗಿ ಇವು ಹಕ್ಕಿ ಜಾತಿಯ ಮೊಟ್ಟೆ ಮೂಲದ ಸಂತಾನಾಭಿವೃದ್ಧಿಯನ್ನು ಹೋಲುತ್ತದೆ. ಇವು ಸಾಮಾನ್ಯವಾಗಿ ನಿಶಾಚರಿಗಳಾಗಿದ್ದು ಚಿಕ್ಕ ಮೀನು, ಸಿಗಡಿ ಇತ್ಯಾದಿಯನ್ನು ತಿಂದು ಬದುಕುತ್ತವೆ. ಇನ್ನು ಇವುಗಳ ವಿಶೇಷತೆ ಎಂದರೆ ಅತಿ ಕಡಿಮೆ ಕರಗಿದ ಆಮ್ಲಜನಕವಿರುವ ನೀರಿನಲ್ಲೂ ನಾಲ್ಕೈದು ಗಂಟೆ ಆರಾಮವಾಗಿ ಓಡಾಡಬಲ್ಲವು. ಕೆಲವು ನಿದರ್ಶನಗಳಲ್ಲಿ ಆಮ್ಲಜನಕ ರಹಿತ ಪರಿಸ್ಥಿಗಳಲ್ಲಿ ಸುಮಾರು ಒಂದು ಗಂಟೆ ಕಾಲ ಜೀವಿಸಿದ್ದೂ ಉಂಟು. ಈ ಅಸಾಧಾರಣ ಸಾಮರ್ಥ್ಯದ ಗುಣ ವಿಶೇಷವನ್ನು ಶೋಧಿಸುತ್ತಿರುವ ವಿಜ್ಞಾನಿಗಳು ಮಾನವ ಶಸ್ತ್ರಕ್ರಿಯಾ ಪ್ರಕ್ರಿಯೆಯಲ್ಲಿ ಅಂಶದಿಂದ ಉಪಯೋಗ ಸಾಧ್ಯತೆಗಳನ್ನು ಸಂಶೋಧಿಸುತ್ತಿದ್ದಾರೆ.
ಮೀನುಗಳು ಕಶೇರುಕಗಳ ಮೊದಲ ಕೊಂಡಿಯಾಗಿರುವುದರಿಂದ ಮಾನವ ವೈದ್ಯಶಾಸ್ತ್ರದ ಪ್ರಮುಖ ಶೋಧನಾ ವಸ್ತುಗಳಾಗಿವೆ.
 

Wednesday, June 29, 2011

Do Fish Commit Suicide..??? ಮೀನು ಆತ್ಮಹತ್ಯೆ ಮಾಡಿಕೊಳ್ಳುತ್ತವೆಯೇ??

Do Fish Die on their own...?? commit suicide?? supposed to be intelligent..!! or Fooled...???

ಮೀನು ಆತ್ಮ ಹತ್ಯೆ ಮಾಡಿಕೊಳ್ಳುತ್ತವೆಯೇ..? !!!
ಬಹಳ ವಿಚಿತ್ರ ಅನ್ಸುತ್ತೆ ಅಲ್ಲವೇ?
ನನ್ನ ಬ್ಲಾಗ್ ತಂಗಿಯೊಬ್ಬಳು "ಅಣ್ಣಾ ನನ್ನ ಗಾಜಿನ ತೊಟ್ಟಿಯ ಮೀನು ಏನು ಹಾಕಿದರೂ ತಿನ್ನುತ್ತಿಲ್ಲ ..ತುಂಬಾ ಲವಲವಿಕೆಯಿಂದ ಇದ್ದದ್ದು ... ಅದರ ಜೊತೆಗಾತಿ(ರ) ಸತ್ತಮೇಲೆ ಇದೂ ಬಡವಾಗ್ತಿದೆ..." ಅಂತ ಒಮ್ಮೆ ಹೇಳಿದ್ದಳು..
ನಾನು ಏನೋ ಒಂದು ನಿವಾರಣೋಪಾಯ ಹೇಳಿದ್ದೆ ಆದರೆ ಕೆಲವು ದಿನಗಳ ನಂತರ ಚಾಟಲ್ಲಿ...
"ಅಣ್ಣಾ ಅದು ಸತ್ತು ಹೋಯಿತು ಕಡೆಗೂ ತಿಂಡಿ ತಿನ್ನಲೇ ಇಲ್ಲ"  
ನನಗೂ ಬೇಸರ ಆಗಿತ್ತು..ನನ್ನ ಉಪಾಯ ಅವಳ ಮೀನನ್ನು ಉಳಿಸಲಿಲ್ಲವಲ್ಲಾ ಎಂದು... "ಹೌದು ಅಣ್ಣಾ ಮೀನುಗಳೂ ಹಾಗಾದ್ರೆ ಆತ್ಮಹತ್ಯೆ ಮಾಡ್ಕೊಳ್ತವಲ್ವಾ..?" ಅಂತ ಸವಾಲು ಹಾಕಿದ್ದಳು...
ಆಗ ಹೂಂ ಎಂದು ಸುಮ್ಮನಾಗಿದ್ದೆ ..ಆದ್ರೆ ನನ್ನ ಮನಸಲ್ಲಿ ಇದೇ ಕೊರೆತ...
ಹಾಗಾದ್ರೆ  ಏಕೆ ಹೀಗೆ...???

Fish live in differnt types of aquatic systems from vast open oceans to huge rivers, from tiny streams to mighty and fast flowing rivers, from fresh waters to highly saline seas, from very cold polar waters to very warm equatorial waters. They have in all (except for a very few species) one common feature and physiological similarity, they thrive on DISSOLVED OXYGEN in water which gets absorbed on the gill surface to enter the blood stream as it happens in mammalian lungs.

ಮೀನು ಹಲವು ವಿಧದ ಜಲಪರಿಸರಗಳಲ್ಲಿ ಜೀವಿಸುತ್ತದೆ- ಸಮುದ್ರ, ನದಿ, ಬಾವಿ ಕುಂಟೆ,  ಸರೋವರ, ಸಿಹಿ ನೀರು, ಉಪ್ಪುನೀರು, ಮಂಜುಗಡ್ಡೆಯಂತೆ ತಣ್ಣನೆಯ ಭೂಗೋಳದ ಧೃವ ಪ್ರದೇಶದ ಸಮುದ್ರ ಸಿಹಿನೀರು, ಭೂಮಧ್ಯರೇಖೆಯ ಬಳಿಯ ಬೆಚ್ಚಗಿನ ಸಮುದ್ರ ಮತ್ತು ಸಿಹಿನೀರ ಕೊಳಗಳು ಹೀಗೆ....ಎಲ್ಲ ಮೀನುಗಳೂ (ಕೆಲವನ್ನು ಬಿಟ್ಟರೆ) ಕಿವಿರುಗಳಮೂಲಕ ನೀರಲ್ಲಿ ಕರಗಿದ ಆಮ್ಲಜನಕವನ್ನು ತೆಗೆದುಕೊಂಡು ರಕ್ತದೊಳಕ್ಕೆ ಹೀರಿಕೊಳ್ಳುತ್ತಾ ರಕ್ತ ಶುದ್ಧಿಗೆ ಅನುವುಮಾಡಿಕೊಡುತ್ತವೆ. ಅಂದರೆ- ಕರಗಿದ ಆಮ್ಲಜನಕ ಮೀನಿನ ಪ್ರಾಣ...!!!

Now lets come to the question- Do fish commit suicide? The incidence of aquarium fish not accepting food after its mate died...seems a case similar to committing suicide..

Fish in the open water move as per their wish, in search of food, in search of mates, for spawning and breeding (some fish varieties go thousand of miles for the act of reproduction and even cross their normal water barriers.. by crossing seas and moving inot rivers).
One of the most common and daily movements is for food.

We witnessed two clear cases of fish kills in the Kuwait bay near shores of Salmiya characterized by the occurence of oxygen-depleted open waters serving as grounds for huge shoals of fish to enter a death trap and die enmass. The June 5th fish-kill is of particular importance...as this was characterized by the dominance of a shoaling sardine fish which move in shoals (each shoal might weigh as huge as 1-2 tonnes, especially seeing that each fish might not weigh more than 20-30g, they number in millions).



(Courtesy Fotos: Scientific team of KISR, Kuwait visiting the site of fish kill)

In similar circumstances sardine shoal was caught and suffered mass mortality during the summer months of 2005 in the Marina of Salmiya. It was a case of suffocated mass dealth of sardines. Oxygen Depleted (anoxic) conditions often occur in shallow coastal areas in conditions that trigger consumption of dissolved oxygen leading to low oxygen levels. Higher water temperatures on one hand reduce oxygen dissolution in water and on the other increase the oxygen demand of the living organisms which again adds to the misery of the fish that enter such anoxic waters.
The temperature, rich organic influx from urban waste dumping, low water circulation -all make the anoxic region an invisible capsule of death trap. The nutrients also trigger the growth of microscopic plankton (fish food) that acts as a lure to the visiting shoal. Unfortunately, when the shoal enters the bay lured by the rich food.. get into feeding frenzy that in turn increases their oxygen demand. The end effect: a huge gap between the availability of dissolved oxygen and the demand for it. So, by the time they realize that they are in the trap...its too late...and the whole shoal collapses due to suffocation.

Now, an intriguing question arises...!! why do the normally very sensible fish (they can detect undesirable conditions and escape from them into safer water..as it is a open waterbody..) enter the trap....?? yes, it is a chance factor..and the rich food that lures..the shoal to move-in instead of move-out from such un welcomed waters. Could this be a suicide..?? or its just the unfortunate mixing of several events leading to trap the fish..??
Now its for you to think....!!!!

ಮೀನುಗಳು ಸಮೂಹದಲ್ಲಿ ಸಂಚರಿಸುವುದು ಅವುಗಳ ಸಹಜ ಸ್ವಾಭಾವ. ಇದನ್ನು ಶೋಲಿಂಗ್ ಬಿಹೇವಿಯರ್ ಅಥವಾ ಸಾಮಾಜಿಕ ಸಮೂಹೀಕರಣ ಎನ್ನುತ್ತೇವೆ, ಇಲ್ಲಿ ಒಂದೇ ವಯಸಿನ ಸಾವಿರಾರು ಮೀನು ಒಟ್ಟಿಗೆ ಸಂಚರಿಸುವುದು ತಮ್ಮ ರಕ್ಷಣೆಗೆ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಅವು ಮುಖ್ಯವಾಗಿ ಸಸ್ಯಾಹಾರಿಗಳಾಗಿರುತ್ತವೆ ಎನ್ನುವುದು (ಕೆಲವು ಮಾಂಸಾಹಾರಿ ಮೀನಿನ ಸಮೂಹಗಳೂ ಕಂಡು ಬರುತ್ತವೆ). ಇವು ಆಹಾರಾನ್ವೇಷಣೆಯಲ್ಲಿ ಸಮುದ್ರದಲ್ಲಿ ವಿಹರಿಸುತ್ತವೆ. ಇಲ್ಲಿ ಸಮೂಹ ಮುಂಖಂಡರ ದಿಶಾನಿರ್ದೇಶನವೂ ಪ್ರಮುಖ ಅಂಶ. ಹೀಗೆ ವಿಹರಿಸುವ ಪ್ರತಿ ಸಮೂಹದ ಒಟ್ಟು ತೂಕ ೧-೨ ಟನ್ ಆಗಿರುತ್ತದೆ.  ಇಂತಹ ಸಮೂಹ ಸಂಚಾರಿಗಳಲ್ಲಿ ನಮ್ಮ ನಾಡಿನಲ್ಲಿ ಕಂಡುಬರುವ ಸಾರ್ಡಿನ್ (ಬೂತಾಯಿ) ಮತ್ತು ಮ್ಯಾಕರೆಲ್ (ಬಂಗುಡೆ) ಪ್ರಮುಖವಾದುವು. ಅದರಲ್ಲೂ ಸಾರ್ಡಿನ್ ಮತ್ತು ಅದೇ ಜಾತಿಯ ಇನ್ನಿತರ ಪ್ರಬೇಧಗಳು ಒಂದೊಂದೂ ೨೦-೩೦ ಗ್ರಾಂ ತೂಕ ಮೀರಿರುವುದಿಲ್ಲ.
ಸಮುದ್ರ ಕರಾವಳಿಗಳು ಭೂಭಾಗದಿಂದ ಹರಿದುಬರುವ ಪೋಷಕಾಂಶಗಳನ್ನು ಪಡೆಯುತ್ತವೆಯಾದ್ದರಿಂದ ಅಲ್ಲಿ ಸ್ವಾಭಾವಿಕವಾಗಿ ಪ್ರಾಥಮಿಕ ಉತ್ಪಾದನೆ (ಪ್ರೈಮರಿ ಪ್ರೊಡಕ್ಶನ್) ಹೆಚ್ಚಾಗಿದ್ದು ಮೀನಿನ ಆಹಾರಪ್ಲವಕ (ಪ್ಲಾಂಕ್ಟಾನ್) ಗಳು ಎತೇಚ್ಛವಾಗಿ ಕಂಡು ಬರುತ್ತವೆ, ಫೊಷಕಾಂಶಗಳ ಈ ಒಳ ಹರಿವು ನಗರ-ಪಟ್ಟಣಗಳ ಒಳಚರಂಡಿ ತ್ಯಾಜ್ಯಗಳ ಕಾರಣ ನಗರ ಪ್ರದೇಶಗಳಿರುವ ಕರಾವಳಿಗಳಲ್ಲಿ ಪ್ರಾಥಮಿಕ ಉತ್ಪಾದನಾ ಕ್ರಿಯೆ ಹೆಚ್ಚಾಗಿರುತ್ತದೆ. ಆಗ ಮಿತಿ ಮೀರಿದ ಪ್ಲವಕಗಳ ಉತ್ಪಾದನೆ ವೈಪರೀತ್ಯಕ್ಕೆ ದಾರಿ ಮಾಡುತ್ತದೆ. ಇಂತಹ ಸಸ್ಯಪ್ಲವಕಗಳಲ್ಲಿ (ಫೈಟೋ ಪ್ಲಾಂಕ್ಟಾನ್) ಹಲವು ನಂಜುಕಾರಕ ವಸ್ತುಗಳ ಸ್ರಾವಕ ಕಂಡುಬರುತ್ತದೆ..ಇವು ಮೀನಿಗೆ ಮಾರಕ, ನಂಜುಕಾರಕ ಅಲ್ಲದಿದ್ದರೆ ಅವುಗಲ ಮಿತಿಮೀರಿದ ಬೆಳವಣಿಗೆಯಿಂದ ಅವು ರಾತ್ರಿ ಸಮಯ ಉಸಿರಾಟಕ್ಕೆ ಆಮ್ಲಜನಕವನ್ನು ವ್ಯಯಿಸುತ್ತವೆ ಹಾಗಾಗಿ ಕರಗಿದ ಆಮ್ಲಜನಕದ ಕೊರತೆ ಅಂತಹ ನೀರಿನಲ್ಲಿ ಕಂಡು ಬರುತ್ತದೆ.
ಇನ್ನು ತ್ಯಾಜ್ಯಗಳ ಸಾವಯವಗಳು ನೀರಿನಲ್ಲಿ ಕೊಳೆಯಲು ಪ್ರಾರಂಭಿಸಿದಾಗ ಆ ಕ್ರಿಯೆಯೂ ಕರಗಿದ ಆಮ್ಲಜನಕವನ್ನು ಉಪಯೋಗಿಸುವಿದರಿಂದ ಆಮ್ಲಜನಕದ ಕೊರತೆ ಅಧಿಕವಾಗುತ್ತದೆ. ಕಡಿಮೆ ಆಳದ ತೀರಪ್ರದೇಶದಲ್ಲಿ ಗಾಳಿ ಮತ್ತು ನೀರಿನ ಆಂತರಿಕ ಹರಿವು ಕಡಿಮೆಯಾದಾಗ, ನೀರಿನ ಉಷ್ಣತೆ ಹೆಚ್ಚಿದಾಗ ನೀರಿನಲ್ಲಿ ಆಮ್ಲಜನಕದ ಕರಗುವಿಕೆಯೂ ಕಡಿಮೆಯಾಗುತ್ತದೆ. ಪ್ಲವಕಗಳ ವೈಪರೀತ್ಯ, ನೀರಿನ ಕಡಿಮೆ ಚಲನೆ, ಅಧಿಕ ಉಷ್ಣತೆ, ಕಡಿಮೆಯಾದ ಕರಗಿದ ಆಮ್ಲಜನಕ, ಪ್ಲವಕಗಳಿಂದ ಆಕರ್ಷಿತ ಮೀನಿನ ಆಗಮನ ಅವುಗಳ ಉತ್ತೇಜಿತ ಆಹಾರಸೇವನಾ ಪ್ರಕ್ರಿಯೆ ಎಲ್ಲವೂ...ಮೀನಿಗೆ ಅವಶ್ಯಕವಾದ ಕರಗಿದ ಆಮ್ಲಜನಕದಲ್ಲಿ ಅತೀವ ಕೊರತೆಯುನ್ನುಂಟು ಮಾಡಿ ಮೀನನ್ನು ಉಸಿರು ಕಟ್ಟಿಸಿ ಸಾಯಿಸುತ್ತದೆ. ಮೀನು ಸ್ವಭಾತಃ ತನಗೆ ಕಿರಿಕಿರಿ ಮಾಡುವ ನೀರಿನ ಗುಣಕಂಡಲ್ಲಿ ಅಲ್ಲಿಂದ ಪಾರಾಗುತ್ತವೆ.

ಈ ಹಿನ್ನೆಲೆಯಲ್ಲಿ ಕುವೈತಿನಲ್ಲಿ ಕಂಡುಬಂದ ಎರಡು ಮೀನಿನ ಸಾಮೂಹಿಕ ಸಾವಿನ (ಫಿಶ್ ಕಿಲ್) ನಿದರ್ಶನಗಳನ್ನು ಉಲ್ಲೇಖಿಸುತ್ತೇನೆ. ಇದೇ ಜೂನ್ ೫ರಂದು ಸಾಲ್ಮಿಯಾದ ಮರಿನಾದಲ್ಲಿ ಸುಮಾರು ೨-೩ ಟನ್ ಮೀನಿನ ಸಾಮೂಹಿಕ ಸಾವು ಮತ್ತು ೨೦೦೫ ರಲ್ಲಿ ಸರಿ ಸುಮಾರು ಇದೇ ಸಮಯದಲ್ಲಾದ ಇನ್ನೊಂದು ಸಾವು. ಎರಡೂ ಪ್ರಕರಣದಲ್ಲಿ ಸಾರ್ಡಿನ ಜಾತಿಯ ಮೀನೇ ಪ್ರಮುಖ ಬಲಿ.

ಸ್ವಾಭಾವಿಕವಾಗಿ ತಪ್ಪಿಸೊಕೊಳ್ಳುವ ಮೀನು ಏಕೆ ಮರಣ-ಕೂಪಕ್ಕೆ ಬಿತ್ತು? ಇದು ಆತ್ಮಹತ್ಯಾ ಪ್ರವೃತ್ತಿಯೇ?.. ಅಥವಾ ನಿಸರ್ಗ ನಿಯಮವೇ..??
ಹೌದು ಇದೊಂದು ರೀತಿ ಆಮಿಶವೊಡ್ಡಿ ಮೀನನ್ನು ಸಾಯಿಸುವ ನಿಸರ್ಗ ನೀತಿ ಎನ್ನಬಹುದೇ..?? ಮೀನಿನ ಶ್ರೀಮಂತ ಆಹಾರಪ್ಲವಕ ಮೈದಾನ ಕಂಡು ಮೀನು ಮುಗಿ ಬೀಳುತ್ತವೆ.... ಹುಚ್ಚಾಟವೆಂಬಂತೆ ಪ್ಲವಕಭಕ್ಷಣೆಯಲ್ಲಿ ತೊಅಡಗುತ್ತವೆ...ಈ ಉತ್ತೇಜಿತ ಆಹಾರಸೇವನಾ ಕ್ರಿಯೆ ಮಾಮೂಲಿಗಿಂತ ೨-೫% ಹೆಚ್ಚು ಆಮ್ಲಜನಕ ಬೇಡಿಕೆಗೆ ಕಾರಣವಾಗುತ್ತದೆ...ಇದೇ ಸಮಯಕ್ಕೆ ಅವು ಹಲವಾರು ಕಾರಣದಿಂದ ಕರಗಿದ ಆಮ್ಲಜನಕದಿಂದ ವಂಚಿತವಾದ ನೀರಿಗೆ ಬಂದುಬಿಟ್ಟಿರುತ್ತವೆ...ಉಸಿರಾಟ ಕಷ್ಟವಾಗಲೆನಿಸುವ ವೇಳೆಗೆ ಕೈಮೀರಿರುತ್ತೆ...ಮೀನು ಉಸಿರುಗಟ್ಟಿ ಸಾಯುತ್ತವೆ..!!!
ಇದು ಹಲವಾರು ಪ್ರಾಕೃತಿಕ ವೈಪರೀತ್ಯಗಳ ಒಂದೆಡೆ ಜಮಾವಣೆ ಮತ್ತು ಅಲ್ಪಕಾಲಿಕ ಮೃತ್ಯು ಕೂಪದ ನಿರ್ಮಾಣ ಮತ್ತು ಕಾತಾಳೀಯ ಎಂಬಂತೆ ಆಮಿಶಕ್ಕೊಳಗಾಗಿ ಒಳಬರುವ ಮೀನಿನ ಸಮೂಹ ಎಲ್ಲದರ ಒಟ್ಟು ಪರಿಣಾಮ.. ಸಮೂಹ ಮರಣ...ಫಿಶ್ ಕಿಲ್!!!
ಏನೆನ್ನಬಹುದು ಆತ್ಮ ಹತ್ಯೆಯೇ?? ಅಥವಾ ಪ್ರಾಕೃತಿಕ ಕ್ರಿಯೆಯೇ ಅಥವಾ ಮಾನವನ ವೈಪರೀತ್ಯವೇ..???? ನೀವೇ ಯೋಚಿಸಿ.








Wednesday, April 27, 2011

ಗಜಮುಖ ಮೃದ್ವಸ್ತಿ ಅಥವಾ ಎಲಿಫೆಂಟ್ ಶಾರ್ಕ್ ಮೀನು

ಗೆಳೆಯರೇ ಮತ್ತು ವಿಜ್ಞಾನಾಸಕ್ತರೇ, ಶಾರ್ಕ್ (shark series) ಸರಣಿಯಲ್ಲಿ ಈ ಕಂತಿನಲ್ಲಿ elephant shark ಗಜಮುಖ ಶಾರ್ಕ್ ಬಗ್ಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದೇನೆ.

ಮೊದಲೇ ತಿಳಿಸಿರುವಂತೆ ಶಾರ್ಕ್ ಮೀನು ಕಶೇರುಕ (vertebrates) ಮತ್ತು ಅಕಶೇರುಕಗಳ (invertebrates) ನಡುವಣ ಬಹು ಮುಖ್ಯ ಕೊಂಡಿ. ಹಾಗಾಗಿ ಪ್ರಾಣಿಜೀವ ಸರಣಿಯ ವಂಶವಾಹಿ (gene) ಗಳ ಸಾರಾಂಶ ಮಾಹಿತಿಯನ್ನು ಹೊಂದಿರುವ ಸಾಧ್ಯತೆಗಳು ಹೆಚ್ಚಾಗಿದ್ದು ಶಾರ್ಕ್ ಗಳ ಅಧ್ಯಯನ ಮಾನವನ ವಂಶವಾಹಿಗಳ ವಿಸ್ತೃತ ಮಾಹಿತಿಯನ್ನು ಕಂಡುಹಿಡಿಯುವಲ್ಲಿ ಬಹು ಉಪಯೋಗಿ ಆಗಬಹುದೆಂದು ಈ ದಿಶೆಯಲ್ಲಿ ಸಮ್ಶೋಧನೆಗಳು ಪ್ರಗತಿಯಲ್ಲಿವೆ. 
ಈ ನಿಟ್ಟಿನಲಿ ಅಂದಿನ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ (ಈಗಿನ ಬಿಜಾಪುರದ ಪಶು ಸಂಗೋಪನೆ ಮತ್ತು ಮತ್ಸ್ಯ ಶಾಸ್ತ್ರ ವಿಶ್ವವಿದ್ಯಾಲಯದ) ಅಧೀನದ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ಮೀನುಗಾರಿಕಾ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ವಿಶೇಷತಃ ನನಗೆ ಹೆಮ್ಮೆಯೆನಿಸುವ ನಮ್ಮ ಸೀನಿಯರ್  ಕನ್ನಡದವರಾದ ಡಾ. ಬೈರಪ್ಪ ವೆಂಕಟೇಶ್ ಸಿಂಗಪೂರ್ ನ  ಸಂಶೋಧನಾ ಸಂಸ್ಥೆಯೊಂದರಲ್ಲಿ ಉನ್ನತ ಸಂಶೋಧನೆಯಲ್ಲಿ ತೊಡಗಿದ್ದಾರೆ.  (http://esharkgenome.imcb.a-star.edu.sg/). ವೈದ್ಯಕೀಯ ಕ್ಷೇತ್ರದ ನೊಬೆಲ್ ವಿಜ್ಞಾನಿ ಬೆನ್ನರ್ ರವರ ಜೊತೆ ಕೆಲಸಮಾಡುವ ಇವರು ಗಜಮುಖ ಮೀನಿನ ಸಂಪೂರ್ಣ ವಂಶವಾಹಿನಿ ಜಾಲವನ್ನು ಬಿಡಿಸಲು ಹೊರಟಿದ್ದಾರೆ. ಈ ಮಾಹಿತಿ ಮಾನವನ ಹಲವಾರು ವೈದ್ಯಕೀಯ ಸವಾಲುಗಳಿಗೆ ಪರಿಹಾರ ಹುಡುಕುವಲ್ಲಿ ಸಹಾಯಕವಾಗಬಹುದು ಎನ್ನುವ ಸಾಧ್ಯತೆ ಇದೆ.
    (ಎಲಿಫೆಂಟ್ ಶಾರ್ಕ್ : ಚಿತ್ರ ಕೃಪೆ ಅಂತರ್ಜಾಲ)

(ಎಲಿಫೆಂಟ್ ಶಾರ್ಕ್: ಚಿತ್ರ ಕೃಪೆ ಅಂತರ್ಜಾಲ)

ಎಲಿಫೆಂಟ್ ಶಾರ್ಕ್, ಭೂತ ಮೀನು, ರೆಪೆರೆಪೆ ಅಥವಾ ಖಮಿರಾ ಎಂದೇ ಕರೆಯಲ್ಪಡುವ ಈ ಮೃದ್ವಸ್ಥಿ ಮೀನು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಸಮುದ್ರಗಳಲ್ಲಿ ಸುಮಾರು ೨೦೦-೫೦೦ ಮೀ ಆಳಗಳಲ್ಲಿ ಕಂಡುಬರುತ್ತದೆ. ಇದು ಹೆಚ್ಚೆಂದರೆ ೧-೧.೨ ಮೀಟರ್ ಬೆಳೆಯುತ್ತದೆ. ಜೀವವಿಕಾಸ ಸರಣಿಯ ಕಶೇರುಕಗಳ ಮೊದಲ ಕೊಂಡಿಗಳು ಎಂದೇ ಬಿಂಬಿತವಾಗುವ ಎಲಿಫೆಂಟ್ ಶಾರ್ಕ್ ಸುಮಾರು ೫೩೦ ದಶ ಲಕ್ಷ ವರ್ಷಗಳ ಹಿಂದೆ ವಿಕಸನ ಹೊಂದಿದ್ದು ಜೀವವಾಹಿನಿಗಳ ಮಾಹಿತಿ ಆಧಾರದಲ್ಲಿ ಮಾನವನ ಜೀವವಾಹಿನಿ ಮತ್ತು ಎಲಿಫೆಂಟ್ ಶಾರ್ಕ್ ನಡುವೆ ಸಾಮ್ಯತೆ ಕಂಡುಬಂದಿದೆ. ಈ ಮೀನಿನ ಜೀವವಾಹಿನಿ ನ್ಯೂಕ್ಲಿಯೋಟೈಡ್ ಪ್ರಮಾಣ ಸುಮಾರು ೯೨೦ ಮೆಗಾ ಬೇಸ್ ಇದೆಯೆಂದು ತಿಳಿಯಲಾಗಿದೆ. ಇವುಗಳ ಇತರೆ ಮಾಹಿತಿಯನ್ನು ಹೊತ್ತ ಮತ್ತೊಂದು ಕಂತು ಸೀಘ್ರದಲ್ಲೇ ಬರಲಿದೆ..................(ನಿಮ್ಮ ಅನಿಸಿಕೆ ಟೀಕೆ, ಟಿಪ್ಪಣಿಯನ್ನು ಸ್ವಾಗತಿಸುತ್ತೇನೆ).

Friday, March 4, 2011

Sharks (ಶಾರ್ಕುಗಳು)----ಚಿತ್ರ ಮಾಹಿತಿ ಮಾಲಿಕೆ...ಎರಡು

ಶಾರ್ಕ್ ಜಾತಿಯ ಸಹಜೀವಿಗಳು - ರೇ ಮತ್ತು ಸ್ಕೇಟ್ ಮೀನುಗಳು
ಇವೂ ಮೃದ್ವಸ್ತಿ ಮೀನುಗಳು. ಆದರೆ ಇವುಗಳ ಆಕಾರ ವಿಭಿನ್ನವಾಗಿರುತ್ತದೆ.
ಇವುಗಳ ಬಗ್ಗೆ ಹೇಳುವುದಕ್ಕೆ ಮುಂಚೆ ಶಾರ್ಕ್ ಮೀನಿನ ಕೆಲವು ವೈವಿಧ್ಯಗಳನ್ನು ತಿಳಿಸಲೇ ಬೇಕು.
ಇವೇ ಸುತ್ತಿಗೆ ತಲೆ ಶಾರ್ಕ್ ಮತ್ತು ಗರಗಸ ಮೂತಿಯ ಶಾರ್ಕ್

ಚಿತ್ರ ಕೃಪೆ: ict.mic.ul.ie

(source: web on sharks)
Hammer Headed Shark ಅಥವಾ ಸುತ್ತಿಗೆ ತಲೆಯ ಶಾರ್ಕ್, ಸುಮಾರು ೨೦ ಅಡಿ ಉದ್ದದವರೆಗೂ ಬೆಳೆಯುತ್ತದೆ, ಇದರಲ್ಲಿ ಒಂದೆರಡು ಪ್ರಬೇಧಗಳು ಮಾನವನಿಗೆ ಅಪಾಯಕಾರಿ ಎಂದು ತಿಳಿದುಬಂದಿದೆ.

ಇನ್ನು ಗರಗಸ ಶಾರ್ಕ್ ಇನ್ನೊಂದು ವಿನೂತನ ಶರೀರ ರೂಪ ಹೊಮ್ದಿದ ಶಾರ್ಕ್. ಇದರ ತಲೆಯ ಮುಂಭಾಗ ಚೂಪಾಗಿ ಮಾರ್ಪಟ್ಟಿದ್ದು ಆ ಭಾಗ ಗರಗಸವನ್ನು ಹೋಲುತ್ತದೆ.

ಹೀಗೇ ಹಲವಾರು ಜಾತಿಯ ಶಾರ್ಕುಗಳಿದ್ದು,,,ಒಮ್ದು ಅಧ್ಯಯನದ ಪ್ರಕಾರ ೪೫೦ ಕ್ಕೂ ಮಿಕ್ಕು ಶಾರ್ಕ್ ಪ್ರಬೇಧಗಳಿವೆ ಎಂದು ತಿಳಿದು ಬಂದಿದೆ.
................................................................................ಇನ್ನೂ ಈ ಮೀನುಗಳ ವಿಧಗಳ ವಿವರ ಮುಂದಿನ ಕಂತಿನಲ್ಲಿ.. 

Saturday, December 11, 2010

Sharks (ಶಾರ್ಕುಗಳು)----ಚಿತ್ರ ಮಾಹಿತಿ ಮಾಲಿಕೆ...ಒಂದು

Sharks...



Sharks are the first links of vertebrates with the vertebrates
ಅಕಶೇರುಕಗಳನ್ನು ಕಶೇರುಕಗಳೊಂದಿಗೆ ಜೋಡಿಸುವ ಕೊಂಡಿಯೇ ಶಾರ್ಕುಗಳು..ಇವುಗಳಲ್ಲಿ ಸಹಜಸ್ತಿ (ಗಡಸು ಮೂಳೆ) ಇರದೆ ಇವನ್ನು ಮೃದ್ವಸ್ತಿಗಳೆಂದು ವಿಂಗಡಿಸಲಾಗಿದೆ.
It is well known that the evolutiona has passed through a very important link in animal life and these wonderful organisms provide many clues to the higher animals and notably the man, the intelligent animal, for his own good.

Let me introduce a few species of sharks to you and give some basic information (thanks to shark information.org)
ಇದನ್ನು ಮಾಹಿತಿ ಅಥವಾ ಮೂಲ ಜ್ಞಾನದ ಬಿತ್ತರಕ್ಕೆ ಪ್ರಯೋಗಿಸುತ್ತಿದ್ದೇನೆ..(ಕೃಪೆ: ಶಾರ್ಕ್ ಇನ್ಫರ್ಮೇಶನ್.ಆರ್ಗ್).

ಜಲಚರಗಳ ವಿಕಸನ ಸರಣಿಯ ಅಮೋಘ ಜೀವಿಗಳು ಶಾರ್ಕ್ ಜಾತಿಯ ಜೀವ ಸಂಕುಲ (ಮೃದ್ವಸ್ತಿಗಳು - Elasmobranchs)
The sharks, skates and rays constitute the Elasmobranch group and they form one of the most majestic life forms of the seas, though some of them may also be seen in the freshwater habitats.

ಶಾರ್ಕ್, ಸ್ಕೇಟ್ ಮತ್ತು ರೇ ಮೂರು ವಿಧದ ಮೀನುಗಳು ಇವುಗಳ ಗಾಂಭೀರ್ಯ ಅನಭಿಶಕ್ತತೆ ನೋಡುತ್ತಲೇ ವಿದಿತವಾಗುತ್ತದೆ. ಇವುಗಳಲ್ಲಿ ಹುರುಪೆ (ಸ್ಕೇಲ್) ವಿಶಿಷ್ಟ ರೀತಿಯ ಪ್ಲಕಾಯ್ಡ್ ಹುರುಪೆಗಳು...ತ್ರಿಭುಜಾಕಾರದ ಚೂಪು ಹುರುಪೆಗಳು ಮತ್ತು ಚರ್ಮ ಬಹು ಗಡಸು, ಒರಟು ಹಾಗೂ ದಪ್ಪ. ಈ ಮೀನುಗಳು ಕಿವಿರು ಸೀಳುಗಳ ಮೂಲಕ ನೀರನ್ನು ಒಳತೆಗೆದುಕೊಂಡು ಆಮ್ಲಜನಕವನ್ನು ಕಿವಿರು ಬಳ್ಳಿಗಳ ಮೂಲಕ ವಿನಿಮಯ ಮಾಯಿಕೊಂಡು ರಕ್ತಕ್ಕೆ ನೀಡುತ್ತವೆ (ಹಿರಿ ಪ್ರಾಣಿಗಳಲ್ಲಿರುವಂತೆ ಇವುಗಳಲ್ಲಿ ಶ್ವಾಸಕೋಶ ಇರುವುದಿಲ್ಲ ಕಿವಿರುಗಳು ಆ ಕೆಲಸ ಮಾಡುತ್ತವೆ). ಹಾಗೆಯೇ ಸಹಜಸ್ತಿ ಮೀನುಗಳಲ್ಲಿರುವಂತೆ ಇವುಗಲಲ್ಲಿ ಕಿವಿರುಕವಚ ಇರುವುದಿಲ್ಲ ಕಿವಿರುಗಳು ಸೀಳುಗಳಾಗಿದ್ದು ತೆರೆದಿರುತ್ತವೆ.

ಮೊದಲಿಗೆ ಕೆಲ ಪ್ರಬೇಧಗಲ ಪರಿಚಯ ಮಾದಿಕೊಂಡು ನಂತರ ಕೆಲವು ಸೂಕ್ಷ್ಮಗಳನ್ನು ತಿಳಿದು ಕೊಳ್ಳೋಣ.

೧. ಮಹಾನ್ ಶ್ವೇತ ಶಾರ್ಕ್ (Great White Shark)


ಇದು ಬಹಳ ಚರ್ಚಿತ (ಚಲನ ಚಿತ್ರದ ನಂತರ -ಜಾಸ್ ಮೂಲಕ) ಸಮುದ್ರ ಜೀವಿ. ಇದು ಸುಮಾರು ೩೫೦ ದಶ ಲಕ್ಷ ವರ್ಷಗಳ ಜೀವವಿಕಾಸ ಹಿನ್ನೆಲೆಯ ಅಮೋಘ ಜೀವಿ.
ಇದರ ವರ್ಗೀಕರಣ ಹೀಗಿದೆ
•Order: Lamniformes

ವರ್ಗ: ಲ್ಯಾಮಿನಿಫಾರ್ಮಿಸ್
•Family: Lamnidae
ಕುಟುಂಬ: ಲ್ಯಾಮ್ನಿಡೇ
•Genus: Carcharodon
ಜೀನಸ್: ಕಾರ್ಕರೋಡಾನ್
•Species: carcharias
ಪ್ರಬೇಧ: ಕಾರ್ಕಾರಿಯಸ್

•Scientific Name: Carcharodon carcharia
ವೈಜ್ಞಾನಿಕ ಹೆಸರು: ಕಾರ್ಕಾರಡಾನ್ ಕಾರ್ಕಾರಿಯ
(ಚಿತ್ರ ಕೃಪೆ: http://www.3.bp.blogspot.com/)

ಸಾಮಾನ್ಯವಾಗಿ ೪೦-೫೦ ವರ್ಷ ಆಯಸ್ಸಿನ ಈ ಮೀನು ೪ ರಿಂದ ೫ ಮೀಟರ್ ಸರಾಸರಿ ಉದ್ದವಿರುತ್ತದೆ (೬.೫ ಮೀ ಸಹಾ ಕಂಡು ಬಂದಿದೆ). ಇವು ೨೦೦೦ ದಿಂದ ೪೦೦೦ ಕೆ.ಜಿ. ತೂಕವಿರುತ್ತವೆ. ಇದರ ಮರಿ ಸುಮಾರು ೧ ರಿಂದ ೧.೫ ಮೀಟರ್ ಉದ್ದವಿರುತ್ತದೆ. ಒಂದು ಹೆಣ್ಣು ಒಮ್ಮೆಗೆ ೬-೧೦ ಮರಿಗಳನ್ನು ಹಾಕುತ್ತದೆ. ಶಾರ್ಕ ಒವೋವೈವಿಪ್ಯಾರಸ್ ಅಂದ್ರೆ ಮರಿಹಾಕುವ (ತಾಯಿ-ಮಗುವಿನ ಮಧ್ಯೆ ಪೋಷಣಾ ಸಂಪರ್ಕವಿಲ್ಲದ) ವಿಧಾನದ ಸಂತಾನೋತ್ಪತ್ತಿ ಮಾಡುತ್ತದೆ. ಹೆಣ್ಣು ಸಮಾನ್ಯವಾಗಿ ಗಂಡಿಗಿಂತ ಹೆಚ್ಚು ಗಾತ್ರವಿರುತ್ತದೆ.